ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022)

Social Share

ನಿತ್ಯ ನೀತಿ : ದುಡಿದು ತಿಂದರೆ ಊಟಕ್ಕೆ ರುಚಿ ಜಾಸ್ತಿ. ನಮ್ಮನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಇದ್ದರೆ ಜೀವನಕ್ಕೆ ಸಿಹಿ ಜಾಸ್ತಿ.

ಪಂಚಾಂಗ ಗುರುವಾರ 15-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ /ನಕ್ಷತ್ರ: ಭರಣಿ /ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.21
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ
: ವ್ಯವಹಾರ ಸಂಬಂಧಿ ಮಾತುಗಳು ಇಂದು ಫಲ ನೀಡಲಿವೆ. ಆರೋಗ್ಯದ ಕಡೆ ಗಮನ ಹರಿಸಿ.
ವೃಷಭ: ಮಿತ್ರರಲ್ಲಿ ಕಂಡುಬರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.
ಮಿಥುನ: ಬಹಳ ದಿನಗಳ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ.

ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.
ಸಿಂಹ: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.
ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.

ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತಿರಾಗಿರುವಿರಿ.
ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
ಧನುಸ್ಸು: ನೀವು ಯೋಚಿಸಿದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.

ಮಕರ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಕುಂಭ: ಮಗಳ ಮದುವೆಯ ಕಾರ್ಯಕಲಾಪಗಳು ಸುಗವಾಗಿ ಸಾಗುವುದರಿಂದ ನೆಮ್ಮದಿ ಇರಲಿದೆ.
ಮೀನ: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸಿ. ಅನಗತ್ಯ ಚರ್ಚೆ ಬೇಡ.

Articles You Might Like

Share This Article