ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2022)

Social Share

ನಿತ್ಯ ನೀತಿ: ಸಾಧ್ಯವೇ ಇಲ್ಲ ಎಂದರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

ಪಂಚಾಂಗ ಮಂಗಳವಾರ 16-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ ನಕ್ಷತ್ರ: ರೇವತಿ /ಮಳೆ ನಕ್ಷತ್ರ: ಆಶ್ಲೇಷ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.40
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30

ರಾಶಿ ಭವಿಷ್ಯ
ಮೇಷ
: ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವರಿಗೆ ಜನಸಾಮಾನ್ಯರಿಂದ ಪ್ರೋತ್ಸಾಹ ಸಿಗಲಿದೆ.
ವೃಷಭ: ಅವಿವಾಹಿತರಿಗೆ ಸೂಕ್ತ ಸಂಬಂಧ ದೊರೆಯಲಿದೆ. ಉತ್ತಮ ಆರೋಗ್ಯವಿರುತ್ತದೆ.
ಮಿಥುನ: ಸ್ಥಗಿತಗೊಂಡ ಕೆಲಸವನ್ನು ಸ್ವಲ್ಪ ಹಣ ಖರ್ಚು ಮಾಡುವ ಮೂಲಕ ಪೂರ್ಣಗೊಳಿಸಿ.

ಕಟಕ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.
ಸಿಂಹ: ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ ಯಾಗುವ ನಿರೀಕ್ಷೆ ಇದೆ.
ಕನ್ಯಾ: ನಷ್ಟ ಉಂಟಾಗಲಿದೆ ಎಂಬ ಕಾರಣದಿಂದ ಜೀವನದಲ್ಲಿ ನಿರುತ್ಸಾಹ ತಾಳದಿರಿ.

ತುಲಾ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ, ಯಶಸ್ಸು ಸಾಧಿಸುತ್ತೀರಿ.
ವೃಶ್ಚಿಕ: ನಿಮ್ಮನ್ನು ಹಿಂದೊಂದು ದಿನ ಅವಮಾನಿಸಿದ ವ್ಯಕ್ತಿಯಿಂದಲೇ ಗೌರವ ಸಿಗಲಿದೆ.
ಧನುಸ್ಸು: ಸಂಗಾತಿಯೊಂದಿಗೆ ಪ್ರವಾಸ ಕೈಗೊಂಡು ಉತ್ತಮ ಸಮಯ ಕಳೆಯುವಿರಿ.

ಮಕರ: ಕಷ್ಟದಲ್ಲಿರುವವರಿಗೆ ನಿಮ್ಮಿಂದಾಗುವ ಸಹಾಯ ಮಾಡುವುದರಿಂದ ನೆಮ್ಮದಿ ಸಿಗಲಿದೆ.
ಕುಂಭ: ದೂರ ಪ್ರಯಾಣದಿಂದ ಅಧಿಕ ಆಯಾಸದಂತಹ ಸಮಸ್ಯೆಗಳು ಎದುರಾಗಲಿವೆ.
ಮೀನ: ರಾಜಕೀಯ ವ್ಯಕ್ತಿಗಳಿಗೆ ಇಂದಿನ ಸನ್ನಿವೇಶಗಳು ಹೆಚ್ಚು ಅನುಕೂಲಕರವಾಗಿರುತ್ತವೆ.

Articles You Might Like

Share This Article