ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2022)

Social Share

ನಿತ್ಯ ನೀತಿ: ನಾನು ಎಂಬುದನ್ನು ಮರೆತು, ನನ್ನಿಂದಲೇ ಎಂಬುದನ್ನು ತೊರೆದು, ನಾವು ಎಂಬುದನ್ನು ನೆನೆದು, ನಮ್ಮಿಂದ ಎಂಬುದನ್ನು ಮನಸಿಟ್ಟು ಎಲ್ಲರೊಳಗೊಂದಾಗಿ ಬದುಕಿದರೆ ಅವನೇ ನಿಜವಾದ ಸಾಧಕ, ಅದುವೇ ಬದುಕಿನ ಸಾಧನೆ..!

ಪಂಚಾಂಗ ಶುಕ್ರವಾರ 16-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ / ಕೃಷ್ಣ ಪಕ್ಷ /ತಿಥಿ: ಷಷ್ಠಿ / ನಕ್ಷತ್ರ: ಕೃತ್ತಿಕಾ /ಮಳೆ ನಕ್ಷತ್ರ:ಉತ್ತರಫಲ್ಗುಣಿ

ಸೂರ್ಯೋದಯ: ಬೆ.06.09
ಸೂರ್ಯಾಸ್ತ; 06.20
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ವೃಷಭ: ಕಷ್ಟದಲ್ಲಿರುವ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಒತ್ತಡಕ್ಕೆ ಒಳಗಾಗದಿರಿ.
ಮಿಥುನ: ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಗಳ ಕಾಟ ಹೆಚ್ಚಾಗಲಿದೆ.

ಕಟಕ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಸಿಂಹ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನೂ ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕದಿರಿ.
ಕನ್ಯಾ: ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.

ತುಲಾ: ಸ್ನೇಹಿತರು, ಹಿತೈಷಿಗಳಿಂದ ಜೀವನ ನಡೆಸಲು ಬೇಕಾದ ಸಹಾಯ ಪಡೆಯುವಿರಿ.
ವೃಶ್ಚಿಕ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.
ಧನುಸ್ಸು: ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಲಿದೆ. ಕುಲದೇವರನ್ನು ಪ್ರಾರ್ಥಿಸಿ.

ಮಕರ: ನಿಮ್ಮ ಅಹಂಕಾರದ ಕಾರಣದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ಕುಂಭ: ಸಹೋದರರಲ್ಲಿ ಉಂಟಾದ ಭಿನ್ನಾಭಿಪ್ರಾಯ ಸೇಡಿಗೆ ತಿರುಗುವ ಸಾಧ್ಯತೆಗಳಿವೆ.
ಮೀನ: ತಂದೆ-ತಾಯಿಯರ ಹಿತವಚನವನ್ನು ಸಹನೆಯಿಂದ ಕೇಳುವುದು ಒಳಿತು.

Articles You Might Like

Share This Article