ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-10-2022)

Social Share

ನಿತ್ಯ ನೀತಿ: ಯಾರ ಮನಸ್ಸಿನಲ್ಲಿ ನಾನೇ ಸರಿ ಎನ್ನುವುದು ಇರುತ್ತದೋ ಆತನಿಗೆ ತನ್ನ ತಪ್ಪಿನ ಅರಿವಾಗುವುದಿಲ್ಲ.

ಪಂಚಾಂಗ ಭಾನುವಾರ 16-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಆರಿದ್ರ /ಮಳೆ ನಕ್ಷತ್ರ: ಚಿತ್ತಾ

ಸೂರ್ಯೋದಯ: ಬೆ.06.10
ಸೂರ್ಯಾಸ್ತ: 06.00
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ
: ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವಿರಿ.
ವೃಷಭ: ಮಕ್ಕಳು ಅವಿಧೇಯತೆಯಿಂದ ನಡೆದು ಕೊಳ್ಳುವುದರಿಂದ ಮನಸ್ಸಿಗೆ ನೋವುಂಟಾಗಲಿದೆ.
ಮಿಥುನ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.

ಕಟಕ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಸಿಂಹ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ಕನ್ಯಾ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.

ತುಲಾ: ಕುಟುಂಬದಲ್ಲಿ ಕಾಣಿಸಿ ಕೊಳ್ಳುವ ಸಮಸ್ಯೆ ಗಳಿಗೆ ಅಂತ್ಯ ಸಿಗಲಿದೆ.
ವೃಶ್ಚಿಕ: ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಭರವಸೆ ಮೂಡಲಿದೆ.
ಧನುಸ್ಸು: ನಿಮ್ಮ ಅತಿಯಾದ ಮಾತಿನಿಂದ ಮನೆ ಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.

ಮಕರ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಕುಂಭ: ಕಾನೂನಿಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.
ಮೀನ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.

Articles You Might Like

Share This Article