ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-11-2022)

Social Share

ನಿತ್ಯ ನೀತಿ: ಸೋಲಿನಿಂದ ಪಾಠ ಕಲಿಯಬೇಕು. ನೋವಿನಿಂದ ಬದುಕು ಅರಿಯಬೇಕು.

ಪಂಚಾಂಗ ಬುಧವಾರ 16-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆಶ್ಲೇಷ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ: ಬೆ.06.19
ಸೂರ್ಯಾಸ್ತ: 05.50
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ
: ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಹೊಟೇಲ್ ಉದ್ದಿಮೆದಾರರಿಗೆ ಆದಾಯದಲ್ಲಿ ವ್ಯತ್ಯಯವಾಗಲಿದೆ.
ವೃಷಭ: ಸಾಂಸಾರಿಕ ಜೀವನದಲ್ಲಿ ಹೊಂದಾಣಿಕೆ ಯಿಂದ ನಡೆದುಕೊಳ್ಳುವುದು ಒಳಿತು.
ಮಿಥುನ: ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಹೊಸ ಯೋಜನೆಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.

ಕಟಕ: ಕಾನೂನು ವಿದ್ಯಾರ್ಥಿಗಳಿಗೆ ಗೊಂದಲದ ವಾತಾವರಣ ಎದುರಾಗಲಿದೆ.
ಸಿಂಹ: ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸಗಳು ನೆರವೇರಲಿವೆ.
ಕನ್ಯಾ: ನೀವು ಕೈ ಹಾಕಿದ ಕೆಲಸಗಳು ಯಾವುದೇ ತೊಂದರೆ ಯಿಲ್ಲದೆ ನೆರವೇರಲಿವೆ.

ತುಲಾ: ಯಾವುದೇ ಅನಿವಾರ್ಯ ಕೆಲಸಗಳಿದ್ದರೂ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ.
ವೃಶ್ಚಿಕ: ಮನೆಯಲ್ಲಿ ಮತ್ತು ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ.
ಧನುಸ್ಸು: ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳ ಭಯ ಕಾಡಲಿದೆ. ಮಾತಿಗೆ ಮಾತು ಬೆಳೆಸುವುದು ಬೇಡ.

ಮಕರ: ನಿಮ್ಮ ಏಳಿಗೆಯನ್ನು ಸಹಿಸಲಾಗದೆ ಹತ್ತಾರು ಶತ್ರುಗಳು ಎದುರಾಗುವರು.
ಕುಂಭ: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
ಮೀನ: ಆದಾಯದಲ್ಲಿ ವೃದ್ಧಿಯಿದ್ದರೂ ನೆಮ್ಮದಿ ಇರುವುದಿಲ್ಲ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.

Articles You Might Like

Share This Article