ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-10-2022)

Social Share

ನಿತ್ಯ ನೀತಿ: ನೊಣಗಳು ನಮ್ಮ ಸುಂದರವಾದ ಇಡೀ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.

ಪಂಚಾಂಗ ಸೋಮವಾರ 17-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಪುನರ್ವಸು / ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ: ಬೆ.06.10
ಸೂರ್ಯಾಸ್ತ: 06.00
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ಮಕ್ಕಳಿಂದ ಆಗುವ ತೊಂದರೆ ತಪ್ಪಲಿದೆ. ಕೆಲವರಿಗೆ ನಿಮ್ಮ ಮೇಲಿದ್ದ ಸಂಶಯ ದೂರವಾಗಲಿದೆ.
ವೃಷಭ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.
ಮಿಥುನ: ಮೇಲಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ಉದ್ಯೋಗಕ್ಕೆ ತೊಂದರೆಯಾಗಲಿದೆ.

ಕಟಕ: ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಸಿಂಹ: ಹಣದ ಕೊರತೆ ಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕನ್ಯಾ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.

ತುಲಾ: ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡದಿರಿ. ದೂರ ಪ್ರಯಾಣ ಬೇಡ.
ವೃಶ್ಚಿಕ: ಕಟ್ಟಡ ನಿರ್ಮಾಣ ಗಾರರಿಗೆ ಹೆಚ್ಚಿನ ಕೆಲಸ ಇರುವುದು. ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ.
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.

ಮಕರ: ಮಾಡುವ ಕೆಲಸದಲ್ಲಿ ತಾಳ್ಮೆ, ಶಿಸ್ತು ಕಾಪಾಡಿ ಕೊಳ್ಳಿ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.
ಕುಂಭ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆ ಯಾಗಲಿದೆ. ಅನೇಕ ಅಡೆತಡೆಗಳು ದೂರವಾಗಲಿವೆ.
ಮೀನ: ಸರ್ಕಾರಿ ನೌಕರರಿಗೆ ಉನ್ನತ ಸ್ಥಾನಮಾನ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

Articles You Might Like

Share This Article