ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-11-2022)

Social Share

ನಿತ್ಯ ನೀತಿ: ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗೇ ಬದಲಾಗುತ್ತಾನೆ. ಅದು ಆತನ ಅಹಂಕಾರವಲ್ಲ,
ನೊಂದ ಮನಸ್ಸಿನ ನಿರ್ಧಾರ.

ಪಂಚಾಂಗ ಗುರುವಾರ 17-11-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಮಘಾ / ಮಳೆ ನಕ್ಷತ್ರ: ವಿಶಾಖ

ಸೂರ್ಯೋದಯ: ಬೆ.06.19
ಸೂರ್ಯಾಸ್ತ: 05.50
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ
: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಸುವಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ವೃಷಭ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಮಿಥುನ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸಿ.

ಕಟಕ: ಸ್ನೇಹಿತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಬಂಧುಗಳಿಂದ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.

ತುಲಾ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.
ವೃಶ್ಚಿಕ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.

ಮಕರ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.
ಕುಂಭ: ಆಸ್ತಿ ಸಂಬಂತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.
ಮೀನ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

Articles You Might Like

Share This Article