ನಿತ್ಯ ನೀತಿ: ನಿಮಗೆ ಸಿಗುವ ಪಾಲನ್ನು ಕೇಳಿ ನೋಡಿ, ಎಲ್ಲ ಸಂಬಂಧಗಳ ಮುಖವಾಡ ಕಳಚಿ ಬೀಳುತ್ತದೆ. ನಿಮಗೆ ಸಿಗುವ ಪಾಲನ್ನು ಬಿಟ್ಟು ನೋಡಿ ಎಲ್ಲ ಮುಳ್ಳುಗಳು ಗುಲಾಬಿ ಹೂಗಳಾಗುತ್ತವೆ.
ಪಂಚಾಂಗ ಶನಿವಾರ 17-12-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.35
ಸೂರ್ಯಾಸ್ತ : 05.57
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಉತ್ತಮ ಅವಕಾಶಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ. ಸೋಮಾರಿತನ ಶತ್ರುವಾಗಿ ಪರಿಣಮಿಸಲಿದೆ.
ವೃಷಭ: ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಸಿಗಲಿದೆ.
ಮಿಥುನ: ಶುಭ ಸಮಾರಂಭಗಳು ನಡೆಯುವುದ ರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಕಟಕ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಸಿಂಹ: ಎಲ್ಲ ಕೆಲಸ- ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ.
ತುಲಾ: ಲೇವಾದೇವಿ ವ್ಯವಹಾರ ನಡೆಸುವುದು ಸರಿಯಲ್ಲ. ಸೋಮಾರಿತನ ಶತ್ರುವಾಗಿ ಪರಿಣಮಿಸಲಿದೆ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.
ಧನುಸ್ಸು: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.
ಮಕರ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಕುಂಭ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಮುನ್ನ ಹಿರಿಯರೊಂದಿಗೆ ಚರ್ಚಿಸಿ.
ಮೀನ: ಸತ್ಕಾರ್ಯಗಳಿಂದ ಮನೆಯಲ್ಲಿ ಸಡಗರ – ಸಂಭ್ರಮದ ವಾತಾವರಣವಿರಲಿದೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,