ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-01-2023)

Social Share

ನಿತ್ಯ ನೀತಿ : ಏನೋ ತಪ್ಪಾಯಿತು ಎಂದು ಬೇಸರ ಮಾಡಬೇಡಿ. ಒಬ್ಬ ವ್ಯಕ್ತಿ ತಪ್ಪೇ ಮಾಡಿಲ್ಲ ಎಂದರೆ ಅವರು ಯಾವ ಹೊಸ ಪ್ರಯೋಗಕ್ಕೂ ಕೈ ಹಾಕಿಲ್ಲ ಎಂದೇ ಅರ್ಥ.

ಪಂಚಾಂಗ ಬುಧವಾರ 18-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಅನುರಾಧಾ / ಯೋಗ: ವೃದ್ಧಿ / ಕರಣ: ಕೌಲವ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.14
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಗೃಹ ನಿರ್ಮಾಣ ಮಾಡುವ ಆಲೋಚನೆಯು ಕುಟುಂಬದ ಸದಸ್ಯರ ಸಂತಸಕ್ಕೆ ಕಾರಣವಾಗುತ್ತದೆ.
ವೃಷಭ: ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳು ಸಿಗಲಿವೆ.
ಮಿಥುನ: ಮಕ್ಕಳಿಂದ ನೆಮ್ಮದಿ ಅಥವಾ ಸಮಾಧಾನದ ಮಾತುಗಳನ್ನು ಕೇಳುವಿರಿ.

ಕಟಕ: ಹಿತಶತ್ರುಗಳ ಕಾಟ ತಪ್ಪಲಿದೆ. ವ್ಯಾಪಾರ ದಲ್ಲಿ ಹೊಸದಾಗಿ ಹಣ ಹೂಡಿಕೆ ಮಾಡುವಿರಿ.
ಸಿಂಹ: ನಿಮ್ಮ ಅಭಿರುಚಿಗೆ ಹೊಂದುವಂತಹ ಜನರ ಪರಿಚಯವಾಗಿ ಮನಸ್ಸಿಗೆ ಸಂತಸವಾಗಲಿದೆ.
ಕನ್ಯಾ: ಎಷ್ಟೇ ಕಷ್ಟ ಬಂದರೂ ಗುರಿ ಸಾಧಿಸುತ್ತೀರಿ. ಅದರ ಪರಿಣಾಮ ಜೀವನದ ಮುಂದಿನ ಹಾದಿ ಸುಗಮವಾಗಲಿದೆ.

ತುಲಾ: ಭೂ ವ್ಯವಹಾರ ದಲ್ಲಿ ಪ್ರಗತಿ ಸಾಧಿಸುವಿರಿ. ನಿರೀಕ್ಷಿಸಿದಷ್ಟು ಲಭಿಸದಿದ್ದರೂ ಹಣಕ್ಕೆ ತೊಂದರೆಯಾಗದು.
ವೃಶ್ಚಿಕ: ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಅನಗತ್ಯ ಮಾತುಗಳಿಗೆ ಕಿವಿಗೊಡದಿರಿ.
ಧನುಸ್ಸು: ವ್ಯಾವಹಾರಿಕ ಜೀವನದ ಕೆಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ.

ಮಕರ: ಕೆಲಸ ಬದಲಿಸುವ ಯೋಚನೆ ಮಾಡುವವರಿಗೆ ಇದು ಸಕಾಲ.
ಕುಂಭ: ಅನಿರೀಕ್ಷಿತವಾಗಿ ದೊರೆತ ಅವಕಾಶಗಳನ್ನು ಮುಜುಗರವಿಲ್ಲದೆ ಬಳಸಿಕೊಳ್ಳಿ.
ಮೀನ: ಕೌಟುಂಬಿಕ ವಿಷಯಗಳಲ್ಲಿ ಬಹಳ ಖುಷಿ ಸಿಗುವುದು. ಜೀವನ ಶೈಲಿ ಬದಲಾಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article