ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2023)

Social Share

ನಿತ್ಯ ನೀತಿ : ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತ ಮಟ್ಟದ್ದಾಗಿರುತ್ತದೆಯೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.

ಪಂಚಾಂಗ ಶನಿವಾರ 18-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಶ್ರವಣ / ಯೋಗ: ಶಿವ /ಕರಣ: ಕೌಲವ

ಸೂರ್ಯೋದಯ : ಬೆ.06.26
ಸೂರ್ಯಾಸ್ತ : 06.30
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಸಂಗಾತಿ ಹಾಗೂ ಕುಟುಂಬದೊಂದಿಗಿನ ಬಾಂಧವ್ಯವು ಬಹಳ ಉತ್ತಮವಾಗಿರುತ್ತದೆ.
ವೃಷಭ: ಹಿರಿಯ ಸಹೋದರ-ಸಹೋದರಿಯ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.
ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಒತ್ತಡ ಕಡಿಮೆಯಾಗಲಿದೆ.

ಕಟಕ: ಬಹಳ ದಿನಗಳ ನಂತರ ಸ್ನೇಹಿತರೊಂದಿಗೆ ಸಂತೋಷವಾಗಿ ಹೆಚ್ಚು ಸಮಯ ಕಳೆಯುವಿರಿ.
ಸಿಂಹ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಕನ್ಯಾ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನು ನಿರ್ಲಕ್ಷಿಸಿದಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ. ಎಚ್ಚರದಿಂದ ಕಾರ್ಯನಿರ್ವಹಿಸಿ.

ವೃಶ್ಚಿಕ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.
ತುಲಾ: ಅಧಿಕ ಕೆಲಸದ ಒತ್ತಡ. ಆಪ್ತ ಮಿತ್ರರ ಆಗಮನ. ಧನ ಲಾಭವಾಗುವ ಯೋಗ.
ಧನುಸ್ಸು: ಆತುರದ ನಿರ್ಧಾರ ಒಳ್ಳೆಯದಲ್ಲ. ಯಾರನ್ನೂ ಹೆಚ್ಚಾಗಿ ನಂಬದಿರಿ.

ಮಕರ: ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕುಂಭ: ದೂರ ಪ್ರಯಾಣ. ಖರ್ಚು ಹೆಚ್ಚಾಗುವ ಸಂಭವ. ಮಾತನಾಡುವಾಗ ಎಚ್ಚರಿಕೆ ಇರಲಿ.
ಮೀನ: ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article