ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-08-2022)

Social Share

ನಿತ್ಯ ನೀತಿ: ಶಕ್ತಿಯೆಲ್ಲ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಲ್ಲಿರಿ. ಎಲ್ಲವನ್ನೂ ಮಾಡಬಲ್ಲಿರಿ.

ಪಂಚಾಂಗ ಗುರುವಾರ 18-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಶ್ರಾವಣ ಮಾಸ /ಕೃಷ್ಣ ಪಕ್ಷ /ತಿಥಿ: ಸಪ್ತಮಿ / ನಕ್ಷತ್ರ: ಭರಣಿ /ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.39
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ
: ಮನೆಗಾಗಿ ವಿಲಾಸಿ ಸಾಮಗ್ರಿಗಳನ್ನು ಖರೀದಿಸುವುದರಿಂದ ಖರ್ಚು ಹೆಚ್ಚಾಗಲಿದೆ.
ವೃಷಭ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದರಿಂದ ವರಮಾನ ಹೆಚ್ಚಾಗಲಿದೆ.
ಮಿಥುನ: ಕೆಲಸ-ಕಾರ್ಯಗಳಲ್ಲಿ ಅಧಿಕ ಹಣ ವ್ಯವಯಾದರೂ ಮುಂದೆ ಅನುಕೂಲವಾಗಲಿದೆ.

ಕಟಕ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಘಟನೆಯೊಂದು ನಡೆಯಲಿದೆ.
ಸಿಂಹ: ನಿಮ್ಮೊಂದಿಗೆ ಕೆಲಸ ಮಾಡುವವರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸುವಿರಿ.

ತುಲಾ: ಪೋಷಕರಿಂದ ಪಿತ್ರಾರ್ಜಿತ ಆಸ್ತಿ ಸಿಗಲಿದೆ.
ವೃಶ್ಚಿಕ: ಬ್ಯಾಂಕ್ ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನ ವ್ಯರ್ಥವಾಗಲಿದೆ.
ಧನುಸ್ಸು: ದಿನಚರಿಯ ಬದಲಾ ವಣೆ ಬಗ್ಗೆ ಗಮನ ಹರಿಸಿ. ದೂರ ಪ್ರಯಾಣ ಮಾಡುವಿರಿ.

ಮಕರ: ಆರ್ಥಿಕ ತಾಪತ್ರಯಗಳು ಹೆಚ್ಚಾಗಲಿವೆ. ಮನೆದೇವರಿಗೆ ಹೋಗಲು ನಿರ್ಧರಿಸುವಿರಿ.
ಕುಂಭ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ಮೀನ: ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವ ಸಂದರ್ಭ ಬರಬಹುದು.

Articles You Might Like

Share This Article