ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-09-2022)

Social Share

ನಿತ್ಯ ನೀತಿ: ಈ ಪ್ರಪಂಚದಲ್ಲಿ ಯಾರು ಕೂಡ ಪರಿಶುದ್ಧರೂ ಅಲ್ಲ, ಪರಿಪೂರ್ಣರೂ ಅಲ್ಲ. ಸಮಯಕ್ಕೆ, ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ ಅಷ್ಟೇ.

ಪಂಚಾಂಗ ಭಾನುವಾರ 18-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ / ಕೃಷ್ಣ ಪಕ್ಷ /ತಿಥಿ: ಅಷ್ಟಮಿ /ನಕ್ಷತ್ರ: ಮೃಗಶಿರಾ /ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.19
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ
: ಉದ್ಯೋಗ ಬದಲಾವಣೆಗೆ ಅಡೆತಡೆ ಉಂಟಾಗಲಿದೆ. ಅತೀ ಒತ್ತಡಕ್ಕೆ ಒಳಗಾಗದಿರಿ.
ವೃಷಭ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಮಿಥುನ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.

ಕಟಕ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಸಿಂಹ: ಆಹಾರದಲ್ಲಿನ ಬದಲಾವಣೆಯಿಂದಾಗಿ ದೇಹದಲ್ಲಿನ ಉಷ್ಣವ್ಯಾ ನಿವಾರಣೆಯಾಗುವುದು.
ಕನ್ಯಾ: ಕೆಲಸ-ಕಾರ್ಯ ಗಳಲ್ಲಿದ್ದ ನಿರಾಸಕ್ತಿ ದೂರವಾಗಲಿದೆ.

ತುಲಾ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ವೃಶ್ಚಿಕ: ಸುಗಂಧ ವಸ್ತುಗಳ ತಯಾರಿಕೆ ಮತ್ತು ಮಾರಾಟಗಾರರಿಗೆ ಹೆಚ್ಚಿನ ಆದಾಯ ದೊರೆಯುವುದು.
ಧನುಸ್ಸು: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.

ಮಕರ: ಅನಿರೀಕ್ಷಿತ ಘಟನೆಯಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ದೂರ ಪ್ರಯಾಣ ಮಾಡುವಿರಿ.
ಕುಂಭ: ಸಹೋದ್ಯೋಗಿಗಳು ಗೌರವಾನ್ವಿತವಾಗಿ ವರ್ತಿಸುವುದರಿಮದ ಕೆಲಸ ಸರಾಗವಾಗಿ ಸಾಗಲಿದೆ.
ಮೀನ: ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ.

Articles You Might Like

Share This Article