ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2023)

Social Share

ನಿತ್ಯ ನೀತಿ: ನಿಮ್ಮ ಅಮೂಲ್ಯ ಸಮಯವನ್ನು ಯಾರಿಗೆ ನೀಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. ಸಮಯ ಹಣಕ್ಕಿಂತ ದುಬಾರಿ.

ಪಂಚಾಂಗ ಗುರುವಾರ 19-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಧ್ರುವ / ಕರಣ: ಗರಜೆ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.14
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ವ್ಯಾಪಾರ ನಿಮಿತ್ತ ಪ್ರಯಾಣ ಮಾಡುವುದರಿಂದ ಹೊಸಬರ ಪರಿಚಯವಾಗಲಿದೆ.
ವೃಷಭ: ರಿಯಲ್ ಎಸ್ಟೇಟ್ ವ್ಯವಹಾರದವರು ಉತ್ತಮ ಹಾಗೂ ಧನಾತ್ಮಕವಾದ ವ್ಯವಹಾರ ತಮ್ಮದಾಗಿಸಿಕೊಳ್ಳುವರು.
ಮಿಥುನ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.

ಕಟಕ: ಸಾಂಸಾರಿಕವಾಗಿ ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದು ಉತ್ತಮ.
ಸಿಂಹ: ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಕಡೆ ಗಮನ ಹರಿಸಿ.
ಕನ್ಯಾ: ಕುಶಲಕರ್ಮಿಗಳಿಗೆ ಪ್ರದರ್ಶನ, ಮಾರಾಟಗಳಿಂದ ಅಧಿಕ ಆದಾಯ ದೊರೆಯಲಿದೆ.

ತುಲಾ: ಕಳೆದುಹೋಗಿದ್ದ ವಸ್ತುಗಳು ಪತ್ತೆಯಾಗಿ ಕೈ ಸೇರುವವು.
ವೃಶ್ಚಿಕ: ಕೆಲ ವಿಚಾರಗಳು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ.
ಧನುಸ್ಸು: ವೈಯಕ್ತಿಕ ವಿಷಯಗಳ ಬಗ್ಗೆ ನಿಗಾ ವಹಿಸಬೇಕಾಗುವುದು.

ಮಕರ: ಅನವಶ್ಯಕ ವಾದ-ವಿವಾದಗಳಿಂದ ದೂರ ಉಳಿಯುವ ಪ್ರಯತ್ನ ಮಾಡಿ.
ಕುಂಭ: ತೈಲ, ಇಂಧನ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ದೊರೆಯಲಿದೆ.
ಮೀನ: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಮನೋವೈದ್ಯರಿಗೆ ಉತ್ತಮ ದಿನ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article