ನಿತ್ಯ ನೀತಿ : ಹುಟ್ಟಿನಿಂದ ಯಾರೂ ಬುದ್ಧಿವಂತರಲ್ಲ. ಏಕೆಂದರೆ ಬುದ್ಧಿವಂತಿಕೆಯು ಒಬ್ಬರ ಪ್ರಯತ್ನದಿಂದ ಉಂಟಾಗುತ್ತದೆ.
ಪಂಚಾಂಗ ಭಾನುವಾರ 19-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಶ್ರವಣ / ಯೋಗ: ವರೀಯಾನ್ / ಕರಣ: ಚತುಷ್ಪಾದ
ಸೂರ್ಯೋದಯ : ಬೆ.06.41
ಸೂರ್ಯಾಸ್ತ : 06.27
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ರಾಶಿ ಭವಿಷ್ಯ
ಮೇಷ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.
ವೃಷಭ: ಸಣ್ಣಪುಟ್ಟ ಅಡಚಣೆಗಳು ಕೆಲಸ-ಕಾರ್ಯಗಳಿಗೆ ಅಡ್ಡಿಯಾಗಲಾರವು.
ಮಿಥುನ: ಸಾಲಬಾಧೆಯಿರುವ ಪರಿಸ್ಥಿತಿಯಲ್ಲಿ ಸಹೋದರರು ಸಹಕರಿಸುವರು.
ಕಟಕ: ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಗಾರರು ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ.
ಸಿಂಹ: ಸಮಾಜದಲ್ಲಿ ಗೌರವ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಕನ್ಯಾ: ಕಠಿಣ ಪರಿಶ್ರಮ ದಿಂದ ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣುವಿರಿ. ದೂರ ಪ್ರಯಾಣ ಬೇಡ.
ತುಲಾ: ದಾಂಪತ್ಯದಲ್ಲಿ ಸಮಸ್ಯೆ ಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.
ವೃಶ್ಚಿಕ: ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸ ಬೇಕಾದ ಅಗತ್ಯವಿದೆ. ಪಿತ್ರಾರ್ಜಿತ ಆಸ್ತಿ ಸಿಗಲಿದೆ.
ಧನುಸ್ಸು: ಉದ್ಯೋಗದಲ್ಲಿರುವ ಒತ್ತಡ ನಿವಾರಿಸಿಕೊಳ್ಳುವುದು ಕಷ್ಟವಾಗುತ್ತದೆ.
ಮಕರ: ಕಠಿಣ ನಿರ್ಧಾರ ಕೈಗೊಳ್ಳುವ ಪ್ರಸಂಗ ಬರಬಹುದು. ಇದಕ್ಕಾಗಿ ವಿಚಲಿತರಾಗಬೇಕಿಲ್ಲ.
ಕುಂಭ: ಅಮೂಲ್ಯ ವಸ್ತುಗಳ ಕಳುವಾಗಬಹುದು. ವಿಭಿನ್ನ ರೀತಿಯಲ್ಲಿ ಕ್ಲಿಷ್ಟಕರ ಸಮಸ್ಯೆ ಬಗೆಹರಿಸುವಿರಿ.
ಮೀನ: ಸಂಗಾತಿಯಿಂದ ಸಾಕಷ್ಟು ಧನ ಸಹಾಯ ದೊರೆಯಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,