ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-03-2023)

Social Share

ನಿತ್ಯ ನೀತಿ : ಬದುಕು ಹೇಗಿರಬೇಕು ಎಂದರೆ ಬೆಳಿಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು. ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು.

ಪಂಚಾಂಗ ಭಾನುವಾರ 19-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಧನಿಷ್ಠಾ / ಯೋಗ: ಸಿದ್ಧ / ಕರಣ: ಗರಜೆ

ಸೂರ್ಯೋದಯ : ಬೆ.06.25
ಸೂರ್ಯಾಸ್ತ : 06.30
ರಾಹುಕಾಲ : 4.30-6.00
ಯಮಗಂಡ ಕಾಲ :12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಕಡಿಮೆಯಾಗಬಹುದು.
ವೃಷಭ: ಕೆಲವು ಕಾರಣಗಳಿಂದ ಒಡಹುಟ್ಟಿದವ ರಿಂದ ದೂರವಾಗಿದ್ದರೆ ಅವರೊಂದಿಗೆ ಮಾತನಾಡುವ ಸಂದರ್ಭಗಳು ಎದುರಾಗಲಿವೆ.
ಮಿಥುನ: ಕೈಗೆತ್ತಿಕೊಂಡ ಕಾರ್ಯದಲ್ಲಿ ಯಶಸ್ವಿಯಾಗುವಿರಿ. ಚಿಂತನಶೀಲರಾಗಿ ಮಾತನಾಡುವಿರಿ.

ಕಟಕ: ಗುರು- ಹಿರಿಯರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.
ಸಿಂಹ: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.
ಕನ್ಯಾ: ನಿರೀಕ್ಷೆಗಿಂತ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗಬಹುದು.

ತುಲಾ: ಕಾನೂನು ತೊಡಕುಗಳು ಬೆನ್ನತ್ತಿ ಬರಲಿವೆ. ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯವಾಗಲಿದೆ.
ವೃಶ್ಚಿಕ: ಸ್ಥಗಿತಗೊಂಡ ಕೆಲಸಗಳು ಮುಂದುವರಿ ಯಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಧನುಸ್ಸು: ವ್ಯಾಪಾರದಲ್ಲಿ ಅಧಿಕ ಲಾಭ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.

ಮಕರ: ಗರ್ಭಿಣಿಯರು, ವೃದ್ಧರು ಆರೋಗ್ಯದ ಕಡೆ ಗಮನ ಹರಿಸಿ, ದೂರ ಪ್ರಯಾಣ ಬೇಡ.
ಕುಂಭ: ವಿನಾಕಾರಣ ವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಯಾರೊಂದಿಗೂ ವಾಗ್ವಾದಕ್ಕಿಳಿಯದಿರಿ.
ಮೀನ: ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article