ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (19-07-2022)

Social Share

ನಿತ್ಯ ನೀತಿ: ನಾನು ಸುಂದರವಾದ ಹುಡುಗನಲ್ಲ, ಆದರೆ ಸಹಾಯಕ್ಕಾಗಿ ಯಾರಾದರೂ ಕೈ ಚಾಚಿದರೆ ನಾನು ಸಹಾಯ ಮಾಡಬಲ್ಲೆ. ಸೌಂದರ್ಯ ಮನಸ್ಸಿನಲ್ಲಿದೇ ಹೊರತು ಮುಖದಲ್ಲಿಲ್ಲ.

ಮಂಗಳವಾರ ಪಂಚಾಂಗ 19-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಪುನರ್ವಸು
*ಸೂರ್ಯೋದಯ: ಬೆ.06.02
*ಸೂರ್ಯಾಸ್ತ : 06.50
*ರಾಹುಕಾಲ : 3.00-4.30
*ಯಮಗಂಡ ಕಾಲ : 9.00-10.30
*ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ: ಚಿಂತನೆಯಿಂದ ವರ್ತಿಸುವ ಮೂಲಕ ಎಲ್ಲರನ್ನೂ ಗೌರವಿಸುವುದು ಒಳಿತು.
ವೃಷಭ: ಕೌಟುಂಬಿಕ ಜೀವನದಲ್ಲಿ ಹೆಚ್ಚು ಜಾಗರೂಕ ರಾಗಿರಬೇಕು. ಮನೆಯವರೊಂದಿಗೆ ಸಮಯ ಕಳೆಯಿರಿ.
ಮಿಥುನ: ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯ ಗಳು ಉಂಟಾಗಬಹುದು.

ಕಟಕ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು.ಆಹಾರದ ಕಡೆ ಗಮನ ನೀಡಿ.
ಸಿಂಹ: ಕಚೇರಿ ಕೆಲಸ – ಕಾರ್ಯಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.
ಕನ್ಯಾ: ಅನೇಕ ವಿಧದ ಜನರು ನಿಮ್ಮ ಬಳಿ ಆಶ್ರಯಕ್ಕಾಗಿ ಬರುವರು.

ತುಲಾ: ತಂದೆಯ ಬೆಂಬಲದೊಂದಿಗೆ, ಭೂಮಿ ಮತ್ತು ಆಸ್ತಿಯ ಲಾಭ ಪಡೆಯಬಹುದು.
ವೃಶ್ಚಿಕ: ಮನೋಸ್ಥೈರ್ಯ ಅಕವಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ಧನುಸ್ಸು: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.

ಮಕರ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಕುಂಭ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಮೀನ: ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಅಥವಾ ಯೋಗ ಮಾಡಬೇಕು.

Articles You Might Like

Share This Article