ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-08-2022)

Social Share

ನಿತ್ಯ ನೀತಿ: ಯಾರಾದರೂ ನಿಮ್ಮನ್ನು ಅವಶ್ಯಕತೆ ಇದ್ದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆಂದರೆ ಬೇಜಾರಾಗಬೇಡಿ, ಸಂತೋಷಪಡಿ. ಏಕೆಂದರೆ ಕತ್ತಲೆಯಾದಾಗಲೇ ಮೇಣದ ಬತ್ತಿ ನೆನಪಾಗುವುದು.

ಪಂಚಾಂಗ ಶುಕ್ರವಾರ 19-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ /ನಕ್ಷತ್ರ: ಕೃತ್ತಿಕಾ /ಮಳೆ ನಕ್ಷತ್ರ: ಮಖಾ

ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.39
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಅನಗತ್ಯ ವಿಚಾರಗಳಿಂದಾಗಿ ಮಾನಸಿಕವಾಗಿ ಗೊಂದಲಗಳು ಉಂಟಾಗಲಿವೆ.
ವೃಷಭ: ಜೀವನ ಸಂಗಾತಿಯಿಂದ ನೀವು ಆರ್ಥಿಕ ಲಾಭ ಮತ್ತು ಗೌರವ ಪಡೆಯುತ್ತೀರಿ.
ಮಿಥುನ: ಹಿರಿಯರು ಹಾಗೂ ಮಾಮನೆಯವರ ಸೂಕ್ತ ಸಲಹೆಗಳಿಂದ ಮುನ್ನಡೆಯುವಿರಿ.

ಕಟಕ: ಹೊಸ ವಾಹನ ಖರೀದಿಸುವ ನಿಮ್ಮ ಬಯಕೆ ಈಡೇರುವುದುರಿಂದ ಮನಸ್ಸಿಗೆ ಸಂತಸ ಸಿಗಲಿದೆ.
ಸಿಂಹ: ನಿರುದ್ಯೋಗಿಗಳಿಗೆ ಅಚ್ಚರಿಯ ರೀತಿಯಲ್ಲಿ ಉದ್ಯೋಗ ದೊರೆಯಲಿದೆ.
ಕನ್ಯಾ: ವೃತ್ತಿರಂಗದಲ್ಲಿ ಒಂದಲ್ಲ ಒಂದು ರೀತಿ ಕಿರಿಕಿರಿ ಉಂಟಾಗಲಿದೆ.

ತುಲಾ: ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ. ದಿನಾಂತ್ಯದಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ವೃಶ್ಚಿಕ: ಹಿರಿಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿವೆ. ವೃತ್ತಿರಂಗದಲ್ಲಿ ಸಹಕಾರ ಕಂಡುಬರುತ್ತದೆ.
ಧನುಸ್ಸು: ಮನಸ್ತಾಪ ತಪ್ಪಿಸಲು ಸಹೋದರರೊಂದಿಗೆ ಅತ್ಯಂತ ಜಾಣ್ಮೆಯಿಂದ ವ್ಯವಹರಿಸುವುದು ಬಹಳ ಒಳಿತು.

ಮಕರ: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಕುಂಭ: ಶತ್ರುಗಳು ಆಗಾಗ ನಿಮ್ಮನ್ನು ಕಲಹಕ್ಕೆ ಕಾರಣರಾಗುವಂತೆ ಮಾಡುವರು.
ಮೀನ: ಅವಿವಾಹಿತರಿಗೆ ತಪ್ಪಿಹೋದ ಸಂಬಂಧಗಳು ಪುನಃ ಕೂಡಿ ಬರಲಿವೆ. ಉತ್ತಮ ದಿನ.

Articles You Might Like

Share This Article