ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2022)

Social Share

ನಿತ್ಯ ನೀತಿ: ಬರೆಯುವ ಪದಗಳೇ ಆಗಲಿ, ನುಡಿಯುವ ಮಾತುಗಳೇ ಆಗಲಿ, ನೋಡುವ ರೀತಿಯೇ ಆಗಲಿ ಇನ್ನೊಬ್ಬರಿಗೆ ಹಿಡಿಸುವಂತಿರಲಿ.

ಪಂಚಾಂಗ ಸೋಮವಾರ 19-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ /ನಕ್ಷತ್ರ: ಆರಿದ್ರಾ / ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.18
ರಾಹುಕಾಲ: 7.30-9.00
ಯಮಗಂಡ ಕಾಲ; 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ
: ಬದುಕಿನಲ್ಲಿ ಹೊಸ ವ್ಯಕ್ತಿಗಳ ಪ್ರವೇಶ ವಾಗಲಿದೆ. ಅವರಿಂದ ಸಲಹೆ-ಸಹಕಾರ ಸಿಗಲಿದೆ.
ವೃಷಭ: ಕೆಲಸಕ್ಕೆ ಪ್ರಯತ್ನಿಸುವವರಿಗೆ ಹೊಸ ಉದ್ಯೋಗ ಸಿಕ್ಕಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ: ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ.

ಕಟಕ: ಹಣಕಾಸು ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಬಹಳ ಒಳಿತು.
ಸಿಂಹ: ವಿವೇಚನೆ ಉಪಯೋಗಿಸಿಕೊಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ.
ಕನ್ಯಾ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ. ದುಂದುವೆಚ್ಚ ಬೇಡ.

ತುಲಾ: ಷೇರು ವ್ಯವಹಾರ ದಲ್ಲಿ ಸಮಸ್ಯೆ ಅಥವಾ ನಷ್ಟ ಸಂಭವಿಸಬಹುದು.
ವೃಶ್ಚಿಕ: ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ.
ಧನುಸ್ಸು: ಬಂಧುಗಳಲ್ಲಿ ವಿಶ್ವಾಸ, ಸಂಬಂಧ ಉಳಿಸಿ-ಬೆಳೆಸಿಕೊಳ್ಳುವತ್ತ ಪ್ರಯತ್ನಿಸಿ.

ಮಕರ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.
ಕುಂಭ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ಮೀನ: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

Articles You Might Like

Share This Article