ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-10-2022)

Social Share

ನಿತ್ಯ ನೀತಿ: ಕಣ್ಣು ಜಗತ್ತನ್ನೆಲ್ಲ ನೋಡುತ್ತದೆ. ಆದರೆ, ತನ್ನೊಳಗೆ ಬಿದ್ದಿರುವ ಸಣ್ಣ ಕಸ ಕೂಡ ಕಣ್ಣಿಗೆ ಕಾಣಿಸುವುದಿಲ್ಲ. ಹಾಗೆಯೇ ಕೆಲವು ಜನರು ಸಹ ಬೇರೆಯವರ ತಪ್ಪು ಅವರಿಗೆ ಎದ್ದು ಕಾಣುತ್ತದೆ. ತನ್ನ ತಪ್ಪಿನ ಬಗ್ಗೆ ಅವರಿಗೆ ಸಣ್ಣ ಅರಿವು ಇರುವುದಿಲ್ಲ.

ಪಂಚಾಂಗ ಬುಧವಾರ 19-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಪುಷ್ಯ / ಮಳೆ ನಕ್ಷತ್ರ: ಚಿತ್ತಾ
ಸೂರ್ಯೋದಯ: ಬೆ.06.10
ಸೂರ್ಯಾಸ್ತ: 05.59
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00

ರಾಶಿ ಭವಿಷ್ಯ
ಮೇಷ: ಕಳೆದುಹೋದ ವಸ್ತುವೊಂದು ಪುನಃ ಸಿಗುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ವೃಷಭ: ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಹಿತಶತ್ರುಗಳ ಕಾಟ ತಪ್ಪುವುದು.
ಮಿಥುನ: ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಮತ್ತು ಏಕಾಗ್ರತೆ ಕಾಯ್ದುಕೊಳ್ಳಿ.

ಕಟಕ: ಹಲವಾರು ವಿಚಾರಗಳಲ್ಲಿ ತೊಂದರೆ ಕಂಡು ಬಂದರೂ ಎಲ್ಲ ಸಮಸ್ಯೆಗಳಿಗೂ ಶೀಘ್ರ ಪರಿಹಾರ ದೊರೆಯಲಿದೆ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ತಲೆದೋರಲಿವೆ.
ಕನ್ಯಾ: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

ತುಲಾ: ಕೌಟುಂಬಿಕ ವಿಷಯದಲ್ಲಿ ಗಂಭೀರ ವಿವಾದ, ಘರ್ಷಣೆಗಳು ನಡೆಯಬಹುದು.
ವೃಶ್ಚಿಕ: ದೂರಾಲೋಚನೆಯಿಂದಾಗಿ ಕಾರ್ಯದಲ್ಲಿ ಯಶಸ್ಸು ಕಂಡುಬರಲಿದೆ.
ಧನುಸ್ಸು: ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದದೆ. ಷೇರು ಬಂಡವಾಳ ಹೆಚ್ಚಾಗಲಿದೆ.

ಮಕರ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಕುಂಭ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ.
ಮೀನ: ತಾಳ್ಮೆಯಿಂದ ಕೆಲಸ-ಕಾರ್ಯಗಳನ್ನು ಮುಗಿಸುವಿರಿ. ವೃತ್ತಿಪರ ಜೀವನ ಅದ್ಭುತವಾಗಿರುತ್ತದೆ.

Articles You Might Like

Share This Article