ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-01-2023)

Social Share

ನಿತ್ಯ ನೀತಿ : ನೀವು ಏನು ಮಾಡುತ್ತಿದ್ದೀರಿ ಮತ್ತು ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ತಿಳಿದಿದ್ದರೆ ಜೀವನವು ಆಸಕ್ತಿದಾಯಕವಾಗಿರುತ್ತದೆ.

ಪಂಚಾಂಗ ಶುಕ್ರವಾರ 20-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಮೂಲಾ / ಯೋಗ: ವ್ಯಾಘಾತ / ಕರಣ: ವಿಷ್ಟಿ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.15
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಸಾಮಾಜಿಕವಾಗಿ ಕಿರಿಕಿರಿ ಅನುಭವಿಸುವಿರಿ. ಬಂಧು-ಮಿತ್ರರ ಭೇಟಿಯಾಗಲಿದೆ.
ವೃಷಭ: ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ವೃತ್ತಿ ಜೀವನದಲ್ಲಿ ಏರುಪೇರಾಗಿ ಗೊಂದಲ ಮೂಡಬಹುದು.
ಮಿಥುನ: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.

ಕಟಕ: ಸದಾಕಾಲ ದುಡಿಯುವ ನಿಮಗೆ ಉತ್ತಮ ಫಲಗಳು ಸಿಗಲಿವೆ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.
ಸಿಂಹ: ವಿನಾಕಾರಣ ಅಧಿಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ.
ಕನ್ಯಾ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.

ತುಲಾ: ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದುಕೊಳ್ಳುವಿರಿ.
ವೃಶ್ಚಿಕ: ಮನೆಗೆ ಹೊಸ ಪೀಠೋಪಕರಣಗಳ ಖರೀದಿಗೆ ಧನ ವ್ಯಯವಾಗಲಿದೆ. ಚಿಂತೆಗೆ ಅವಕಾಶವಿಲ್ಲ.
ಧನುಸ್ಸು: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.

ಮಕರ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಕುಂಭ: ದೂರ ಪ್ರಯಾಣ ಅಥವಾ ಮನೆಯಿಂದ ದೂರ ಉಳಿಯುವುದು ಒಳ್ಳೆಯದಲ್ಲ.
ಮೀನ: ನೂತನ ವ್ಯವಹಾರ ಪ್ರಾರಂಭದ ಯೋಚನೆ ಯಲ್ಲಿರುವವರು ಅದರ ಸಾಧಕ-ಬಾಧಕಗಳ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸುವುದು ಉತ್ತಮ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article