ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-02-2023)

Social Share

ನಿತ್ಯ ನೀತಿ : ಎಲ್ಲವೂ ಇದ್ದು ಶಕ್ತಿಶಾಲಿಗಳು ಎನ್ನಿಸಿಕೊಳ್ಳುವುದು ದೊಡ್ಡದಲ್ಲ. ಎಲ್ಲ ಕಳೆದಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ.

ಪಂಚಾಂಗ ಸೋಮವಾರ 20-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಧನಿಷ್ಠಾ / ಯೋಗ: ಪರಿಘ / ಕರಣ: ಕಿಂಸ್ತುಘ್ನ

ಸೂರ್ಯೋದಯ : ಬೆ.06.40
ಸೂರ್ಯಾಸ್ತ : 06.27
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಸಹೋದ್ಯೋಗಿಗಳು ಮತ್ತು ಮೇಲ್ವಿಚಾರಕ ರೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಿ.
ವೃಷಭ: ದಿನಸಿ ವರ್ತಕರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಯವಾಗಲಿದೆ.
ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸುವಿರಿ. ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸ್ಥಾಪಿಸುವಿರಿ.

ಕಟಕ: ಒತ್ತಡ, ಉತ್ಸಾಹ, ಹುಮ್ಮಸ್ಸಿನಿಂದಾಗಿ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
ಸಿಂಹ: ದುಡುಕುತನ ಒಳ್ಳೆಯ ದಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ.
ಕನ್ಯಾ: ವಿದ್ಯಾರ್ಥಿಗಳಿಗೆ ಮಿತ್ರ ವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು.

ತುಲಾ: ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ವೈದ್ಯಕೀಯ ವೆಚ್ಚಗಳು ವಿಪರೀತವಾಗಲಿವೆ.
ವೃಶ್ಚಿಕ: ಹಣ ಅಥವಾ ಗೌರವ ಎರಡರಲ್ಲಿ ಒಂದನ್ನು ಸಂಪಾದಿಸುವಿರಿ. ಭಿನ್ನಾಭಿಪ್ರಾಯ ದೂರವಾಗಲಿದೆ.
ಧನುಸ್ಸು: ಫೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬರುವುದು ಒಳಿತು.

ಮಕರ: ವಾಹನ ಖರೀದಿಸುವ ಯೋಚನೆಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಕುಂಭ: ನಿಮ್ಮ ಕೆಲಸದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಮೀನ: ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವ ತೀರ್ಮಾನ ಕೈಗೊಳ್ಳಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article