ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-09-2022)

Social Share

ನಿತ್ಯ ನೀತಿ: ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ.

ಪಂಚಾಂಗ ಮಂಗಳವಾರ 20-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಪುನರ್ವಸು / ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ : ಬೆ.06.09
ಸೂರ್ಯಾಸ್ತ: 06.17
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30

ರಾಶಿ ಭವಿಷ್ಯ
ಮೇಷ
: ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಸೂಕ್ತ.
ವೃಷಭ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ಮಿಥುನ: ಮನೆಗೆ ಬಂದ ಅತಿಥಿಗಳು ನಿಮ್ಮ ಮನೆಯಲ್ಲೇ ಉಳಿದುಕೊಳ್ಳುವರು.

ಕಟಕ: ವಾಣಿಜ್ಯೋದ್ಯಮಿಗಳು ಭದ್ರತೆ ಬಗ್ಗೆ ಗಮನ ಹರಿಸಿ. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ.
ಸಿಂಹ: ನಿಮ್ಮ ನೇರ ನಡೆ-ನುಡಿ ಕಲಹಕ್ಕೆ ದಾರಿಯಾಗಬಹುದು.
ಕನ್ಯಾ: ಉತ್ಸಾಹದಿಂದ ಕೆಲಸ ಮಾಡುವುದರಿಂದ ಎಲ್ಲ ಕಾರ್ಯ ಗಳಲ್ಲೂ ಯಶಸ್ಸು ಸಿಗಲಿದೆ.

ತುಲಾ: ಆರೋಗ್ಯದ ವಿಷಯದಲ್ಲಿ ಜಾಗರೂಕ ರಾಗಿರುವುದು ಒಳ್ಳೆಯದು.
ವೃಶ್ಚಿಕ: ಗೆಳೆಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.
ಧನುಸ್ಸು: ಹಣಕಾಸಿನ ವ್ಯವಹಾರಗಳು ಸುಗಮವಾಗಿ ಸಾಗುವುದರಿಂದ ನಿರಾಳರಾಗಿರುವಿರಿ.

ಮಕರ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಕುಂಭ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳು ಇತ್ಯರ್ಥವಾಗಲಿವೆ.
ಮೀನ: ಬಹು ದಿನಗಳ ಕನಸು ನನಸಾಗಲಿದೆ. ಹಿಂದೆ ಮಾಡಿದ್ದ ಸಾಲ ತೀರಿಸುವಿರಿ.

Articles You Might Like

Share This Article