ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-08-2022)

Social Share

ನಿತ್ಯ ನೀತಿ: ಇನ್ನೊಬ್ಬರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಬಳಸಿಕೊಳ್ಳಬಾರದು.

ಪಂಚಾಂಗ ಭಾನುವಾರ 21-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು /ಶ್ರಾವಣ ಮಾಸ /ಕೃಷ್ಣ ಪಕ್ಷ /ತಿಥಿ: ದಶಮಿ / ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.38
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ: ದಿನವಿಡೀ ಶ್ರಮದಿಂದ ದುಡಿಯುವಿರಿ. ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.
ವೃಷಭ: ಬುದ್ಧಿ ಸಾಮಥ್ರ್ಯ ಪರೀಕ್ಷೆಯಲ್ಲಿ ಗೆಲುವು ಸಾಧಿಸುವಿರಿ. ಷೇರು ಮಾರಾಟದಿಂದ ಲಾಭವಿದೆ.
ಮಿಥುನ: ತಲೆನೋವು, ಮೊಣಕಾಲು ನೋವಿನಿಂದ ತೊಂದರೆಗೆ ಸಿಲುಕುವಿರಿ.

ಕಟಕ: ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ.
ಸಿಂಹ: ಮುಂದಿನ ಯೋಜನೆ ಗಳ ಬಗ್ಗೆ ಇಂದಿನಿಂದಲೇ ಕಾರ್ಯಾಚರಣೆ ಪ್ರಾರಂಭಿಸುವಿರಿ.
ಕನ್ಯಾ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ.

ತುಲಾ: ಮಕ್ಕಳ ನಡವಳಿಕೆ ಮತ್ತು ಅವರು ಆಡುವ ಮಾತುಗಳಿಂದ ನಿಮ್ಮ ಮನಸ್ಸಿಗೆ ನೋವಾಗಲಿದೆ.
ವೃಶ್ಚಿಕ: ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಧನುಸ್ಸು: ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗುವುದು.

ಮಕರ: ಉದಾಸೀನತೆ ಹಾಗೂ ಬೇಜವಾಬ್ದಾರಿ ಯಿಂದ ಅಭಿವೃದ್ಧಿ ಕುಂಠಿತವಾಗಲಿದೆ.
ಕುಂಭ: ಬಂಧು-ಮಿತ್ರರ ಸಹಾಯ ಸಿಗಲಿದೆ. ವ್ಯಾಪಾರಸ್ಥರಿಗೆ ಅಧಿಕ ಲಾಭವಿರುವುದು.
ಮೀನ: ಉನ್ನತ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವರು. ಎಚ್ಚರಿಕೆಯಿಂದಿರಿ.

Articles You Might Like

Share This Article