ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2023)

Social Share

ನಿತ್ಯ ನೀತಿ : ಕೋಪ ಮನಸ್ಸಿನಲ್ಲಿರಬಾರದು. ಕೇವಲ ಮಾತಿನಲ್ಲಿರಬೇಕು. ಪ್ರೀತಿ ಕೇವಲ ಮಾತಿನಲ್ಲಿರಬಾರದು. ಮನಸ್ಸಿನಲ್ಲಿರಬೇಕು.

ಪಂಚಾಂಗ ಭಾನುವಾರ 22-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಶ್ರವಣ / ಯೋಗ: ವಜ್ರ-ಸಿದ್ಧಿ / ಕರಣ: ಕಿಂಸ್ತುಘ್ನ
ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.16
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.
ವೃಷಭ: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಗೆಳೆಯರೊಂದಿಗೆ ಸಮಯ ಕಳೆಯುವಿರಿ.
ಮಿಥುನ: ಉದ್ಯೋಗ ಬದಲಾವಣೆಗೆ ಅವಕಾಶ ಗಳಿವೆ. ನಿಮ್ಮದಲ್ಲದ ವಿಷಯಗಳಿಗೆ ತಲೆ ಹಾಕದಿರಿ.

ಕಟಕ: ಶುಭ ಕಾರ್ಯ ಕೈಗೊಳ್ಳಲು ಸೂಕ್ತ ಸಮಯವಿದು. ಅವಿವಾಹಿ ತರು ಶುಭ ಸುದ್ದಿ ಕೇಳುವರು.
ಸಿಂಹ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಆದಾಯ ಬರಲಿದೆ.
ಕನ್ಯಾ: ಅಕ್ಕಪಕ್ಕದವರೊಂದಿಗೆ ಸಂಯಮದಿಂದ ನಡೆದುಕೊಳ್ಳುವುದು ಒಳಿತು.

ತುಲಾ: ಯಾವುದೇ ಅನಿವಾರ್ಯತೆ ಇಲ್ಲದೆ ಕೇವಲ ಹಿರಿಮೆಗಾಗಿ ವಿಲಾಸಿ ವಸ್ತುಗಳನ್ನು ಖರೀದಿಸುವಿರಿ.
ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ಧನುಸ್ಸು: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.

ಮಕರ: ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಶಾಂತಿ, ಸಮಾಧಾನ ಅಗತ್ಯ.
ಕುಂಭ: ಅಪವಾದದ ಭೀತಿಗೆ ಒಳಗಾಗದಿರಿ. ನಾನಾ ರೀತಿಯಲ್ಲಿ ಹಣ ಕೈ ಸೇರಲಿದೆ.
ಮೀನ: ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶಗಳು ಸಿಗಲಿವೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article