ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-02-2023)

Social Share

ನಿತ್ಯ ನೀತಿ : ಮನುಷ್ಯನ ನಿಜವಾದ ಸಂಪತ್ತು ಅವನ ಹಣ, ಬಂಗಾರ ಅಥವಾ ಬಂಗಲೆ ಅಲ್ಲ. ಅವನ ಸಂಪತ್ತು ಎಂದರೆ ಅವನ ನಗುತ್ತಿರುವ ಕುಟುಂಬ ಮತ್ತು ಸಂತೃಪ್ತ ಮನಸ್ಸು.

ಪಂಚಾಂಗ ಬುಧವಾರ 22-02-2023
ಶುಭಕೃತ್‍ ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ಸಾಧ್ಯ / ಕರಣ: ತೈತಿಲ

ಸೂರ್ಯೋದಯ: ಬೆ.06.39
ಸೂರ್ಯಾಸ್ತ : 06.27
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಅನಾವಶ್ಯಕ ಗೊಂದಲಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಸಮಾಧಾನದಿಂದ ಕೆಲಸ ಮಾಡಿ.
ವೃಷಭ: ಅತಿಯಾದ ಸಿಟ್ಟಿನಿಂದ ಅಮೂಲ್ಯ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಮಿಥುನ: ಹೊಸ ಉದ್ಯೋಗಕ್ಕೆ ಸೇರಿಕೊಂಡಿರುವ ನಿಮಗೆ ಆರಂಭದಲ್ಲಿ ಕಷ್ಟವಾಗಲಿದೆ.

ಕಟಕ: ನೀವು ಹೇಳಿದಂತೆಯೇ ನಡೆದಯಬೇಕು ಎಂಬ ಹಠ ಬಿಟ್ಟು ತಾಳ್ಮೆಯಿಂದ ವರ್ತಿಸಿ.
ಸಿಂಹ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಕನ್ಯಾ: ಆರೋಗ್ಯದಲ್ಲಿ ಏರು ಪೇರಾಗುವುದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ.

ತುಲಾ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆಗಳಿವೆ. ಹೆಚ್ಚು ಎಚ್ಚರಿಕೆ ಇರಲಿ.
ವೃಶ್ಚಿಕ: ತಂತ್ರಜ್ಞರು ಮತ್ತು ಕುಶಲ ಕರ್ಮಿಗಳ ಬೇಡಿಕೆಗಳು ಹೆಚ್ಚಾಗಲಿವೆ.
ಧನುಸ್ಸು: ಸಾಕಷ್ಟು ಆತ್ಮವಿಶ್ವಾಸ, ಲವಲವಿಕೆಯಿಂದ ಕೆಲಸ-ಕಾರ್ಯಗಳನ್ನು ಮಾಡಿ ಮುಗಿಸುವಿರಿ.

ಮಕರ: ಷೇರು ವ್ಯವಹಾರದಲ್ಲಿ ತೊಡಗಿ ಕೊಂಡಿರುವವರಿಗೆ ಅಲ್ಪ ಪ್ರಮಾಣ ಲಾಭ.
ಕುಂಭ: ಗೆಳೆಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಮೀನ: ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಸಂತೋಷಗೊಳಿಸುವಿರಿ

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article