ನಿತ್ಯ ನೀತಿ: ಮನುಷ್ಯ ತನ್ನಲ್ಲಿರುವ ಗುಣ, ನಡತೆಯಿಂದ ದೊಡ್ಡವನಾಗುತ್ತಾನೆಯೇ ಹೊರತು ಅವನ ಆಸ್ತಿ-ಅಂತಸ್ತಿನಿಂದಲ್ಲ.
ಶುಕ್ರವಾರ ಪಂಚಾಂಗ 22-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಭರಣಿ
ಮಳೆ ನಕ್ಷತ್ರ: ಪುಷ್ಯ
*ಸೂರ್ಯೋದಯ: ಬೆ.06.03
*ಸೂರ್ಯಾಸ್ತ: 06.49
*ರಾಹುಕಾಲ ” 10.30-12.00
*ಯಮಗಂಡ ಕಾಲ: 3.00-4.30
*ಗುಳಿಕ ಕಾಲ: 7.30-9.00
ಮೇಷ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ವೃಷಭ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಮಿಥುನ: ಪೋಷಕರು ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸುವುದು ಸೂಕ್ತ.
ಕಟಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಸಿಂಹ: ಹೆಜ್ಜೆಹೆಜ್ಜೆಗೂ ಶತ್ರು ಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.
ಕನ್ಯಾ: ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ.
ತುಲಾ: ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ಇರಲಿದೆ.
ವೃಶ್ಚಿಕ: ಉದ್ಯೋಗದಲ್ಲಿ ಆಸಕ್ತಿ ಉಂಟಾಗಲಿದೆ. ಅನಿರೀಕ್ಷಿತ ಧನಾಗಮನವಾಗಲಿದೆ.
ಧನುಸ್ಸು: ನಂಬಿದ ಜನರಿಂದ ಮೋಸ ಹೋಗುವಿರಿ. ಕೆಲಸ-ಕಾರ್ಯಗಳಿಗೆ ವಿಘ್ನ ಎದುರಾಗಲಿದೆ.
ಮಕರ: ಇತರರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಂದ ಪ್ರಶಂಸೆ ಪಡೆಯುವಿರಿ.
ಕುಂಭ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಒಳಿತು.
ಮೀನ: ಶತ್ರುಗಳ ಕಾಟ ಹೆಚ್ಚಾಗಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ.