ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-08-2022)

Social Share

ನಿತ್ಯ ನೀತಿ: ಎದ್ದು ನಿಂತು ಗಟ್ಟಿಯಾಗಿ ಮಾತನಾಡುವುದಷ್ಟೇ ತಾಕತ್ತಲ್ಲ, ಸುಮ್ಮನೆ ಕುಳಿತು ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಒಂದು ತಾಕತ್ತೇ.

ಪಂಚಾಂಗ ಸೋಮವಾರ 22-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು /ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ /ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.37
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00

ರಾಶಿ ಭವಿಷ್ಯ
ಮೇಷ: ಕುಟುಂಬದಲ್ಲಿ ಅಶಾಂತಿ ವಾತಾವರಣ ಉಂಟಾಗಲಿದೆ. ತಂದೆಗೆ ರೋಗ ಬಾಧೆ ಕಾಡಬಹುದು.
ವೃಷಭ: ಸಹೋದರರು ಆರ್ಥಿಕ ಸಹಾಯ ಮಾಡು ವುದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ.
ಮಿಥುನ: ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಬಹುದು. ಎಚ್ಚರದಿಂದಿರಿ.

ಕಟಕ: ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಯೋಗವಿದೆ.
ಸಿಂಹ: ರಾಜಕೀಯ ಕ್ಷೇತ್ರದಲ್ಲಿರುವವರು ಮುನ್ನಡೆ ಸಾಸುವರು.
ಕನ್ಯಾ: ಸಣ್ಣಪುಟ್ಟ ವಿಷಯ ಗಳಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.

ತುಲಾ: ವಿವಾಹದ ಮಾತು ಕತೆ ನಡೆಯಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.
ವೃಶ್ಚಿಕ: ಖರ್ಚು ಸ್ವಲ್ಪ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ.
ಧನುಸ್ಸು: ಸಮಾಜದಲ್ಲಿ ಗೌರವ, ಕೀರ್ತಿ ನಿಮ್ಮನ್ನು ಅರಸಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಕರ: ವ್ಯಾಪಾರಿಗಳಿಗೆ ಅನುಕೂಲಕರ ದಿನ. ಗೃಹ ನಿರ್ಮಾಣ ಮಾಡಲು ಯೋಚಿಸುವಿರಿ.
ಕುಂಭ: ಅಜೀರ್ಣ, ವಾಯು, ತಲೆನೋವು, ಕೀಲುನೋವಿನಂತಹ ಆರೋಗ್ಯ ಸಮಸ್ಯೆ ಕಾಡಲಿವೆ.
ಮೀನ: ಅನಾವಶ್ಯಕ ವಸ್ತುಗಳ ಖರೀದಿ ಮಾಡುವಿರಿ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.

Articles You Might Like

Share This Article