ನಿತ್ಯ ನೀತಿ: ತಪ್ಪುಗಳು, ಸೋಲುಗಳು, ಅವಮಾನಗಳು, ನಿರಾಸೆಗಳು, ತಿರಸ್ಕಾರಗಳು..! ಇವುಗಳೆಲ್ಲವೂ ಉನ್ನತಿ ಮತ್ತು ಬೆಳವಣಿಗೆಯ ಭಾಗಗಳು. ಯಾವುದೇ ವ್ಯಕ್ತಿ ಈ ಅನುಭವಗಳಿಂದ ಹಾದು ಹೋಗದೆ ಜೀವನದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಪಂಚಾಂಗ ಗುರುವಾರ 22-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು /ಭಾದ್ರಪದ ಮಾಸ /ಕೃಷ್ಣ ಪಕ್ಷ /ತಿಥಿ: ದ್ವಾದಶಿ /ನಕ್ಷತ್ರ: ಆಶ್ಲೇಷ
ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.16
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30
ರಾಶಿ ಭವಿಷ್ಯ
ಮೇಷ: ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.
ವೃಷಭ: ಸರ್ಕಾರದಿಂದ ಆಗಬೇಕಾದ ಕೆಲಸಗಳು ಪ್ರಭಾವಿಗಳ ಮಧ್ಯಸ್ಥಿಕೆಯಿಂದ ನಡೆಯಲಿವೆ.
ಮಿಥುನ: ಹಳೆ ವಾಹನ ಖರೀದಿಸುವುದರಿಂದ ರಿಪೇರಿ ವೆಚ್ಚ ಹೆಚ್ಚಾಗಬಹುದು.
ಕಟಕ: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡದರಿರುವುದು ಒಳಿತು.
ಸಿಂಹ: ಮನೆ ಬಗ್ಗೆ ಉದಾಸೀನ ತೋರದೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ.
ಕನ್ಯಾ: ಕುಟುಂಬದಲ್ಲಿಕಾಣಿಸಿ ಕೊಳ್ಳುವ ಸಮಸ್ಯೆ ಗಳಿಗೆ ಅಂತ್ಯ ಸಿಗಲಿದೆ.
ತುಲಾ: ಮೇಲಧಿಕಾರಿಗ ಳೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ಉದ್ಯೋಗಕ್ಕೆ ತೊಂದರೆಯಾಗಲಿದೆ.
ವೃಶ್ಚಿಕ: ನಿಮ್ಮ ಅತಿಯಾದ ಮಾತಿನಿಂದ ಮನೆಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.
ಧನುಸ್ಸು: ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡದಿರಿ. ದೂರ ಪ್ರಯಾಣ ಬೇಡ.
ಮಕರ: ಮಾಡುವ ಕೆಲಸದಲ್ಲಿ ತಾಳ್ಮೆ, ಶಿಸ್ತು ಕಾಪಾಡಿ ಕೊಳ್ಳಿ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.
ಕುಂಭ: ಹಲವು ವಿಷಯಗಳ ಬಗ್ಗೆ ಜನರು ನಿಮ್ಮಿಂದ ಸಲಹೆ-ಸೂಚನೆಗಳನ್ನು ಪಡೆಯುವರು.
ಮೀನ: ಹಣಕಾಸು ವಿಚಾರದಲ್ಲಿ ತುಸು ಜಾಣತನ ತೋರದಿದ್ದಲ್ಲಿ ಹೆಚ್ಚು ತೊಂದರೆಗೆ ಸಿಲುಕುವಿರಿ.