ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-10-2022)

Social Share

ನಿತ್ಯ ನೀತಿ; ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಬಂದಂತೆ ಸ್ವೀಕರಿಸಿದರೆ ಎದುರಿಸುವ ಶಕ್ತಿ ತಂತಾನೇ ಬರುತ್ತದೆ.

ಪಂಚಾಂಗ ಶನಿವಾರ 22-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ಚಿತ್ತಾ

ಸೂರ್ಯೋದಯ: ಬೆ.06.11
ಸೂರ್ಯಾಸ್ತ: 05.57
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ: 6.00-7.30

ರಾಶಿ ಭವಿಷ್ಯ
ಮೇಷ
: ಷೇರು ವ್ಯವಹಾರದಲ್ಲಿ ಸಮಸ್ಯೆ ಅಥವಾ ನಷ್ಟ ಸಂಭವಿಸಬಹುದು. ಎಚ್ಚರಿಕೆಯಿಂದಿರಿ.
ವೃಷಭ: ಮಕ್ಕಳ ವಿಷಯದಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಿ. ದುಂದುವೆಚ್ಚ ಮಾಡದಿರಿ.
ಮಿಥುನ: ಕುಟುಂಬದಲ್ಲಿ ಅಸಮಾಧಾನದ ವಾತಾ ವರಣ ತಿಳಿಗೊಳ್ಳಲಿದೆ.

ಕಟಕ: ಮಾನಸಿಕ ದುಃಖ ಅನುಭವಿಸುವಿರಿ. ಅಧಿಕ ವೆಚ್ಚವಾಗಬಹುದು.
ಸಿಂಹ: ನಿಮ್ಮಲ್ಲಿನ ಒಳ್ಳೆಯ ತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವರು.
ಕನ್ಯಾ: ದೈನಂದಿನ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ಹರಿಸಿ. ತಂದೆಗೆ ಅನಾರೋಗ್ಯ ಕಾಡಲಿದೆ.

ತುಲಾ: ಬರುವ ಅವಕಾಶ ಗಳನ್ನು ಸದುಪ ಯೋಗಪಡಿಸಿಕೊಳ್ಳಿ. ಸುಖ ಭೋಜನ ಮಾಡುವಿರಿ.
ವೃಶ್ಚಿಕ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೈನಂದಿನ ಜೀವನದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಧನುಸ್ಸು: ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗಬಹುದು.

ಮಕರ: ಅನ್ಯರಿಗೆ ಸಹಾಯ ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದಿರಿ.
ಕುಂಭ: ಕಟ್ಟಡ ನಿರ್ಮಾಣ ಮಾಡುವವರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ ದೊರೆಯಲಿದೆ.
ಮೀನ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ದೃಢ ನಿರ್ಧಾರ ಕೈಗೊಳ್ಳಿ.

Articles You Might Like

Share This Article