ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-12-2022)

Social Share

ನಿತ್ಯ ನೀತಿ : ನಮಗೆ ಎಷ್ಟೇ ಜ್ಞಾನವಿದ್ದರೂ, ಕೆಲವೊಮ್ಮೆ ನಮ್ಮ ಲೆಕ್ಕಾಚಾರಗಳು ತಪ್ಪಿಬಿಡುತ್ತವೆ. ಏಕೆಂದರೆ ನಾವು ಕೂಡಿಸಿ ಗುಣಿಸುವಷ್ಟರಲ್ಲಿ ಮೇಲಿರುವವನು ನಮ್ಮನ್ನು ಭಾಗಿಸಿ ಕಳೆದಿರುತ್ತಾನೆ.

ಪಂಚಾಂಗ ಗುರುವಾರ 22-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.37
ಸೂರ್ಯಾಸ್ತ : 05.59
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಸದಾಕಾಲ ದುಡಿಯುವ ನಿಮಗೆ ಇಂದು ಉತ್ತಮ ಫಲಗಳು ಸಿಗಲಿವೆ.
ವೃಷಭ: ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕ್ರಮೇಣ ಪ್ರಗತಿ ಕಂಡುಕೊಳ್ಳುವಿರಿ.
ಮಿಥುನ: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಗೆಳೆಯರಿಂದ ಮೋಸ ಹೋಗುವಿರಿ.

ಕಟಕ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಸಿಂಹ: ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ. ನೂತನ ವ್ಯಕ್ತಿಯ ಪರಿಚಯವಾಗಲಿದೆ.
ಕನ್ಯಾ: ಅಸಹಾಯಕರಿಂದ ಸಹಾಯ ಮಾಡುವುದ ರಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ.

ತುಲಾ: ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ.
ವೃಶ್ಚಿಕ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಬಯಸುವಿರಿ.
ಧನುಸ್ಸು: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.

ಮಕರ: ಸಾಮಾಜಿಕವಾಗಿ ಕಿರಿಕಿರಿ ಅನುಭವಿಸ ಬೇಕಾಗಬಹುದು. ಬಂಧು-ಮಿತ್ರರ ಭೇಟಿಯಾಗಲಿದೆ.
ಕುಂಭ: ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಅಗತ್ಯ ವಸ್ತುಗಳನ್ನು ಖರೀದಿಸುವಿರಿ.
ಮೀನ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.

#DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article