ನಿತ್ಯ ನೀತಿ : ಶುದ್ಧ ಚಾರಿತ್ರ್ಯವೊಂದೇ ಕಷ್ಟ- ಪರಂಪರೆಗಳ ಅಬೇಧ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.
ಪಂಚಾಂಗ ಗುರುವಾರ 23-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ರೇವತಿ / ಯೋಗ: ಶುಭ / ಕರಣ: ವಣಿಜ್
ಸೂರ್ಯೋದಯ : ಬೆ.06.39
ಸೂರ್ಯಾಸ್ತ : 06.27
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿ ಭವಿಷ್ಯ
ಮೇಷ: ದೂರದ ಊರಿಗೆ ಪ್ರಯಾಣ ಬೆಳೆಸಬೇಕೆಂಬ ನಿಮ್ಮ ಬಯಕೆ ಈಡೇರಲಿದೆ.
ವೃಷಭ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿ ದರೆ ತೀರಿಸಲು ಕಷ್ಟವಾಗಲಿದೆ.
ಮಿಥುನ: ದುಷ್ಟ ಜನರ ಸಹವಾಸದಿಂದ ದೂರವಿರು ವುದು ಬಹಳ ಒಳಿತು. ಸುಖ ಭೋಜನ ಮಾಡುವಿರಿ.
ಕಟಕ: ನಿಮ್ಮ ಆಲೋಚನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ.
ಸಿಂಹ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡಬೇಡಿ. ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.
ಕನ್ಯಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ತುಲಾ: ಭವಿಷ್ಯದ ಬಗ್ಗೆ ಅನಗತ್ಯವಾಗಿ ಚಿಂತಿಸುವುದನ್ನು ಬಿಟ್ಟು ಇಂದಿನ ಬಗ್ಗೆ ಯೋಚಿಸಿ.
ವೃಶ್ಚಿಕ: ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸ ಬೇಕಾದ ಅಗತ್ಯವಿದೆ. ಪಿತ್ರಾರ್ಜಿತ ಆಸ್ತಿ ಸಿಗಲಿದೆ.
ಧನುಸ್ಸು: ಸಣ್ಣಪುಟ್ಟ ಸಾಲದ ಹಣ ಹಿಂದಿರುಗುವಿರಿ. ಹಿರಿಯ ಅಧಿಕಾರಿಗಳ ಸಂಪರ್ಕ ದಲ್ಲಿ ಕೆಲಸ-ಕಾರ್ಯಗಳಿಗೆ ಪುಷ್ಟಿ ದೊರೆಯಲಿದೆ.
ಮಕರ: ಹೊಸ ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ತಯಾರಿ ನಡೆಸುವಿರಿ. ದೂರ ಪ್ರಯಾಣ ಮಾಡುವಿರಿ.
ಕುಂಭ: ಆದಾಯದಲ್ಲಿ ಅಭಿವೃದ್ಧಿ ಹೊಂದುವಿರಿ. ಧಾರ್ಮಿಕ ಅಥವಾ ಪುಣ್ಯ ಕಾರ್ಯಗಳನ್ನು ಮಾಡುವಿರಿ.
ಮೀನ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವುದು ಸೂಕ್ತ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,