ನಿತ್ಯ ನೀತಿ: ಒಬ್ಬರು ನಮಗೆ ಹೊಂದಿಕೊಂಡಿಲ್ಲ ಅಂದರೆ ನಾವೇ ಹೊಂದಿಕೊಂಡು ಹೋಗುವುದು ಬುದ್ಧಿವಂತಿಕೆ. ನಮ್ಮ ಹೊಂದಿಕೊಳ್ಳುವಿಕೆ ಅವರಿಗೆ ಸಹಿಸಲು ಕಷ್ಟ ಅಂತ ಅನಿಸಿದರೆ ನಾವೇ ಅವರಿಂದ ದೂರವಾಗುವುದು ಪ್ರಜ್ಞಾವಂತಿಕೆ.
ಶನಿವಾರ ಪಂಚಾಂಗ 23-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಕೃತ್ತಿಕಾ / ಮಳೆ ನಕ್ಷತ್ರ: ಪುಷ್ಯ
*ಸೂರ್ಯೋದಯ: ಬೆ.06.03
*ಸೂರ್ಯಾಸ್ತ: 06.49
*ರಾಹುಕಾಲ: 9.00-10.30
*ಯಮಗಂಡ ಕಾಲ: 1.30-3.00
*ಗುಳಿಕ ಕಾಲ: 6.00-7.30
ರಾಶಿ ಭವಿಷ್ಯ
ಮೇಷ: ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಕನಸು ನನಸಾಗಲಿದೆ.
ವೃಷಭ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಿಥುನ: ಸಣ್ಣ ತಪ್ಪುಗಳಾಗ ಬಹುದು. ಇದರಿಂದ ಉನ್ನತ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವರು. ಎಚ್ಚರಿಕೆಯಿಂದಿರಿ.
ಕಟಕ: ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಶ್ರಮ ಪಡಬೇಕಾದೀತು.
ಸಿಂಹ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಕನ್ಯಾ: ಕಚೇರಿ ಕೆಲಸ -ಕಾರ್ಯಗಳಲ್ಲಿ ಉತ್ತಮ ಬದಲಾವಣೆಯಾಗಲಿದೆ.
ತುಲಾ: ಹಿರಿಯರನ್ನು ಗೌರವಿ ಸುವುದರಿಂದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗಲಿದೆ.
ವೃಶ್ಚಿಕ: ಹಣ ಸುಲಭವಾಗಿ ದೊರೆಯುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡದಿರಿ.
ಧನುಸ್ಸು: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮಕರ: ಸಹೋದ್ಯೋಗಿಗಳೊಂದಿಗೆ ಬಹಳ ಎಚ್ಚರಿಕೆಯಿಂದ ಮಾತನಾಡುವುದು ಒಳಿತು.
ಕುಂಭ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆಒಳಗಾಗಬಹುದು.
ಮೀನ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಸ್ವಂತ ವ್ಯವಹಾರ ಮಾಡಲು ಪ್ರಯತ್ನಿಸುವಿರಿ.