ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2022)

Social Share

ನಿತ್ಯ ನೀತಿ: ಗಾಜಿನ ಚೂರಿನಂತೆ ವಿಶ್ವಾಸವೂ. ಒಮ್ಮೆ ಒಡೆದರೆ ಮತ್ತೆ ಹಳೆಯದರಂತೆ ಆಗಲಾರದು.

ಪಂಚಾಂಗ ಭಾನುವಾರ 23-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಉತ್ತರಾ / ಮಳೆ ನಕ್ಷತ್ರ: ಚಿತ್ತಾ

ಸೂರ್ಯೋದಯ: ಬೆ.06.11
ಸೂರ್ಯಾಸ್ತ: 05.57
ರಾಹುಕಾಲ: 4.30-6.00
ಯಮಗಂಡ ಕಾಲ: 12.00-1.30
ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ
: ಆರ್ಥಿಕವಾಗಿ ಅನುಕೂಲಕರ ದಿನವಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ.
ಮಿಥುನ: ಸಮಾಧಾನದಿಂದ ವಿಚಾರ ವಿನಿಮಯ ಮಾಡಿಕೊಂಡರೆ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ.

ಕಟಕ: ಕೆಲಸಗಳು ಸರಾಗವಾಗಿ ನಡೆದು ಮನಸ್ಸು ನಿರಾಳವಾಗಲಿದೆ. ಉತ್ತಮ ದಿನ.
ಸಿಂಹ: ಎಲ್ಲರಿಂದಲೂ ತಪ್ಪಾಗುವುದು ಸಹಜ. ಧೈರ್ಯವಾಗಿ ಮುನ್ನುಗ್ಗಬೇಕು.
ಕನ್ಯಾ: ತಾಂತ್ರಿಕ ಕ್ಷೇತ್ರ ದವರಿಗೆ ಮೇಲಧಿಕಾರಿಗಳಿಂದ ಒತ್ತಡಗಳು ಬರಲಿವೆ.

ತುಲಾ: ಸ್ನೇಹಿತರು ಹಾಗೂ ನೆರೆಹೊರೆಯವರಿಂದ ಆರ್ಥಿಕವಾಗಿ ನೆರವು ದೊರೆಯಲಿದೆ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಬಹು ದಿನಗಳ ಕನಸು ನನಸಾಗಲಿದೆ.
ಧನುಸ್ಸು: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

ಮಕರ: ಮಕ್ಕಳ ವಿಷಯದಲ್ಲಿ ಜಾಗ್ರತೆಯಿಂದಿರಿ. ಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ಗಣ್ಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ಮೇಲಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯಲಿದೆ.

Articles You Might Like

Share This Article