ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(23-12-2022)

Social Share

ನಿತ್ಯ ನೀತಿ: ಸೋಲಿಗೆ ಆ ಕ್ಷಣ ಮಿಡುಕಿದರೂ ಮತ್ತೆ ಎದ್ದು ನಿಲ್ಲುವೆ. ಅಭ್ಯಾಸವಾಗಿದೆ ಸೋಲು. ನನ್ನೊಂದಿಗೆ ಆಟವಾಡುತ್ತಲೇ ತಾನೇ ಸೋತು ಹೋಗುತ್ತದೆ ಅಂತ್ಯದಲ್ಲಿ.

ಪಂಚಾಂಗ ಶುಕ್ರವಾರ 23-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಮೂಲಾ /ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.38
ಸೂರ್ಯಾಸ್ತ : 00.00
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನ. ಕುಟುಂಬದಲ್ಲಿ ಶಾಂತಿ, ಸಮಾಧಾನ ಇರುತ್ತದೆ.
ವೃಷಭ: ಕೆಲ ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯಗಳಿಗೆ ಮತ್ತೊಮ್ಮೆ ವಿಘ್ನ ಎದುರಾಗಬಹುದು.
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅನವಶ್ಯಕ ಖರ್ಚು ನಿಯಂತ್ರಿಸುವುದು ಒಳಿತು.

ಕಟಕ: ಉನ್ನತ ಅಧಿಕಾರ ದೊರೆಯಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಎಚ್ಚರದಿಂದಿರಿ.
ಸಿಂಹ: ಸಂಪನ್ಮೂಲ ವೃದ್ಧಿ ಗಾಗಿ ಹೊಸ ಮಾರ್ಗ ಕಂಡು ಕೊಳ್ಳುವಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರ ನಿರಾತಂಕವಾಗಿ ಮುಂದುವರಿಯಲಿದೆ.

ತುಲಾ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ವೃಶ್ಚಿಕ: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಮನೋವೈದ್ಯರಿಗೆ ಉತ್ತಮ ದಿನ.
ಧನುಸ್ಸು: ಹೆಚ್ಚು ಶ್ರಮ ವಹಿಸಿದರೆ ಆದಾಯ ಹೆಚ್ಚಾಗ ಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ.

ಮಕರ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ.
ಕುಂಭ: ನಾನಾ ರೀತಿಯ ತೊಂದರೆ ಎದುರಿಸ ಬೇಕಾಗುತ್ತದೆ. ಕೋಪ ನಿಯಂತ್ರಿಸಿದರೆ ಒಳಿತು.
ಮೀನ: ಎಲ್ಲ ಕೆಲಸ-ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article