ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-02-2023)

Social Share

ನಿತ್ಯ ನೀತಿ : ಪ್ರಾಣಿ ಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

ಪಂಚಾಂಗ ಶುಕ್ರವಾರ 24-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಅಶ್ವಿನಿ / ಯೋಗ: ಶುಕ್ಲ / ಕರಣ: ಭವ

ಸೂರ್ಯೋದಯ : ಬೆ.06.38
ಸೂರ್ಯಾಸ್ತ : 06.28
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ: ಖರ್ಚಿನ ಬಗ್ಗೆ ನಿಗಾ ವಹಿಸಿ. ವಿದ್ಯಾಭ್ಯಾಸದಲ್ಲಿ ಅಡೆತಡೆ ಉಂಟಾಗಲಿದೆ.
ವೃಷಭ: ಉದ್ಯೋಗ ಸ್ಥಳದಲ್ಲಿ ಪೈಫೋಟಿ, ಪ್ರತಿರೋಧಗಳು ಎದುರಾಗಬಹುದು.
ಮಿಥುನ: ತಂದೆ ಕಡೆಯಿಂದ ಧನಾಗಮನವಾಗಲಿದೆ. ಎಲ್ಲರೂ ನಿಮ್ಮ ಮಾತು ಕೇಳ ಬೇಕೆಂದು ಹಠ ಹಿಡಿಯಬೇಡಿ.

ಕಟಕ: ಆಕಸ್ಮಿಕ ಧನಲಾಭ ವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವುದರಿಂದ ಸಂತಸವಾಗಲಿದೆ.
ಸಿಂಹ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.
ಕನ್ಯಾ: ನಿಮ್ಮ ಇಚ್ಛೆಯಂತೆ ಕೆಲಸದ ಯೋಜನೆಗಳು ನಿರ್ವಹಿಸುವಿರಿ.

ತುಲಾ: ಮನೋಸ್ಥೈರ್ಯ ಅಧಿಕವಾಗಿರುವುದ ರಿಂದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ.
ವೃಶ್ಚಿಕ: ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಧನುಸ್ಸು: ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರು ಸೋಲು ಒಪ್ಪಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ.

ಮಕರ: ವ್ಯಾಪಾರದಲ್ಲಾಗುತ್ತಿರುವ ನಷ್ಟಗಳ ಬಗ್ಗೆ ಗಮನ ಹರಿಸಿ. ವದಂತಿಗಳಿಗೆ ಕಿವಿಗೊಡದಿರಿ.
ಕುಂಭ: ಅನವಶ್ಯಕ ವಿಚಾರಗಳನ್ನು ತಲೆಗೆ ಹಚ್ಚಿಕೊಳ್ಳದೆ ಗುರಿ ಮುಟ್ಟುವತ್ತ ಚಿತ್ತ ಹರಿಸಿ.
ಮೀನ: ನಿಮ್ಮ ಸಮಾಧಾನಕ್ಕೆ ಎಲ್ಲರಿಂದ ಶ್ಲಾಘನೆಗೆ ಒಳಗಾಗುವಿರಿ. ಸೂಕ್ತ ಪ್ರತಿಫಲ ದೊರೆಯಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article