ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ (24-07-2022)

Social Share

ನಿತ್ಯ ನೀತಿ: ಪ್ರಾರ್ಥನೆಯು ನಂಬಿಕೆಯ ಧ್ವನಿ. ಪ್ರಾರ್ಥನೆಯು ಮನುಷ್ಯರನ್ನು ಬದಲಾಯಿಸುವ ಮೂಲಕ ಪರಿಸ್ಥಿತಿಯನ್ನು ಬದಲಿಸುತ್ತದೆ.

ಭಾನುವಾರ ಪಂಚಾಂಗ 24-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ /ನಕ್ಷತ್ರ: ರೋಹಿಣಿ / ಮಳೆ ನಕ್ಷತ್ರ: ಪುಷ್ಯ
*ಸೂರ್ಯೋದಯ: ಬೆ.06.03
*ಸೂರ್ಯಾಸ್ತ: 06.49
*ರಾಹುಕಾಲ: 4.30-6.00
*ಯಮಗಂಡ ಕಾಲ: 12.00-1.30
*ಗುಳಿಕ ಕಾಲ: 3.00-4.30

ರಾಶಿ ಭವಿಷ್ಯ
ಮೇಷ
: ಅದೃಷ್ಟವು ನಿಮ್ಮ ಕಡೆಗಿರುತ್ತದೆ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.
ವೃಷಭ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಮಿಥುನ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಕಟಕ: ಕಾರ್ಯ ಸಾಮಥ್ರ್ಯ ವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಸಿಂಹ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ಕನ್ಯಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆದುಕೊಳ್ಳಿ.

ತುಲಾ: ಇಲ್ಲಸಲ್ಲದ ವಿಚಾರಗಳಿಗೆ ಕಿವಿಗೊಟ್ಟು ಮನಸ್ಸಿನ ನೆಮ್ಮದಿ ಹಾಳುಕೊಳ್ಳಬೇಡಿ.
ವೃಶ್ಚಿಕ: ಸರ್ಕಾರಿ ನೌಕರರಿಗೆ, ಕೃಷಿಕರಿಗೆ ಅನುಕೂಲಕರವಾದ ದಿನ.
ಧನುಸ್ಸು: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.

ಮಕರ: ಸಮಸ್ಯೆಗಳಿಗೆ ಶಾಂತಿ ಮತ್ತು ಸಭ್ಯತೆಯಿಂದ ಪರಿಹಾರ ಕಂಡುಕೊಳ್ಳುವುದು ಒಳಿತು.
ಕುಂಭ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.
ಮೀನ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.

Articles You Might Like

Share This Article