ನಿತ್ಯ ನೀತಿ: ಎಲ್ಲರ ಗೆಲುವಿನಲ್ಲಿ ತನ್ನ ಗೆಲುವು ಕಾಣಲು ಒಳ್ಳೆಯ ಮನಸ್ಸಿದ್ದರೆ ಸಾಲದು, ಕಾರ್ಯರೂಪಕ್ಕೆ ತರುವ ಗುಣವಿರಬೇಕು.
ಪಂಚಾಂಗ ಬುಧವಾರ 24-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು / ಶ್ರಾವಣ ಮಾಸ /ಕೃಷ್ಣ ಪಕ್ಷ /ತಿಥಿ: ದ್ವಾದಶಿ /ನಕ್ಷತ್ರ: ಪುನರ್ವಸು / ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.36
ರಾಹುಕಾಲ: 12.00-1.30
ಯಮಗಂಡ ಕಾಲ: 7.30-9.00
ಗುಳಿಕ ಕಾಲ: 10.30-12.00
ರಾಶಿ ಭವಿಷ್ಯ
ಮೇಷ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಷಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಹೊಂದುತ್ತೀರಿ.
ಮಿಥುನ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಕಟಕ: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.
ಸಿಂಹ: ಕೌಟುಂಬಿಕ ವಿಷಯದಲ್ಲಿ ಗಂಭೀರ ವಿವಾದ, ಘರ್ಷಣೆಗಳು ನಡೆಯಬಹುದು.
ಕನ್ಯಾ: ಉದ್ಯೋಗ ಸ್ಥಳದಲ್ಲಿ ಪೈಪೋಟಿ, ಪ್ರತಿರೋಧಗಳು ಎದುರಾಗಬಹುದು.
ತುಲಾ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಸ್ವಂತ ವ್ಯವಹಾರ ಮಾಡಲು ಪ್ರಯತ್ನಿಸುವಿರಿ.
ವೃಶ್ಚಿಕ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.
ಧನುಸ್ಸು:ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ಮಕರ: ಸಾಕಷ್ಟು ಆತ್ಮವಿಶ್ವಾಸ, ಲವಲವಿಕೆಯಿಂದ ಕೆಲಸ-ಕಾರ್ಯಗಳನ್ನು ಮಾಡಿ ಮುಗಿಸುವಿರಿ.
ಕುಂಭ: ಸಹೋದ್ಯೋಗಿಗಳು ಮತ್ತು ಮೇಲ್ವಿಚಾರಕ ರೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಿ.
ಮೀನ: ವಾಹನ ಖರೀದಿಸುವ ಯೋಚನೆಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.