ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-11-2022)

Social Share

ನಿತ್ಯ ನೀತಿ: ಯಾರೊಬ್ಬರಿಗಾಗಿಯೂ ಅಳಬೇಡಿ. ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ. ಯಾರು ನಿಮ್ಮ ಕಣ್ಣೀರಿಗೆ ಯೋಗ್ಯರೋ ಅವರು ನಿಮ್ಮನ್ನು ಅಳಲು ಬಿಡುವುದಿಲ್ಲ.

ಪಂಚಾಂಗ ಗುರುವಾರ 24-11-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಅನುರಾಧ / ಮಳೆ ನಕ್ಷತ್ರ: ಅನುರಾಧ

ಸೂರ್ಯೋದಯ: ಬೆ.06.22
ಸೂರ್ಯಾಸ್ತ: 05.50
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳು ಓದಿನಲ್ಲಿ ವಿಶೇಷ ಪ್ರಗತಿ ಕಾಣುವರು. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ವೃಷಭ: ಒಡಹುಟ್ಟಿದವರ ಸಹಾಯ-ಸಹಕಾರ ದಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಮಿಥುನ: ದಾಯಾದಿ ಕಲಹವಾಗಬಹುದು. ದೂರ ಪ್ರಯಾಣ ಮಾಡದಿರುವುದು ಒಳಿತು.


ಕಟಕ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ಸಿಂಹ: ಆಹಾರದಲ್ಲಾಗುವ ವ್ಯತ್ಯಾಸದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಕನ್ಯಾ: ಉದ್ಯೋಗ ನಿಮಿತ್ತ ಪ್ರಯಾಣ ಮಾಡುವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.


ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ.
ವೃಶ್ಚಿಕ: ಸಮಾಜದಲ್ಲಿ ಗೌರವ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಧನುಸ್ಸು: ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆ ಗಮನ ಹರಿಸುವರು. ಶಾಂತಿ, ಸಮಾಧಾನ ಅಗತ್ಯ.

ಮಕರ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಕುಂಭ: ಆದಾಯ ಮೀರಿ ಖರ್ಚು-ವೆಚ್ಚಗಳು ಹೆಚ್ಚಾಗಿ ಕಂಡುಬರಲಿವೆ. ಗೃಹಿಣಿಯರಿಗೆ ಸಂಭ್ರಮದ ದಿನ.
ಮೀನ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ.ಅಧಿಕಾರಿಗಳಿಂದ ಮನ್ನಣೆ ಗಳಿಸುವಿರಿ.

DailyHoroscope, #Horoscope,#KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article