ನಿತ್ಯ ನೀತಿ : ವಾದ ಮಾಡಿ ದೂರ ಹೋದವರನ್ನು ನಂಬಬಹುದು. ಹತ್ತಿರ ಇದ್ದು ಅಪವಾದ ಮಾಡುವವರನ್ನು ಯಾವತ್ತೂ ನಂಬಬಾರದು.
ಪಂಚಾಂಗ ಶನಿವಾರ 24-12-2022
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಪೂರ್ವಾಷಾಢ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.38
ಸೂರ್ಯಾಸ್ತ : 06.00
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.
ವೃಷಭ: ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ಉತ್ತಮ ಫಲಿತಾಂಶಗಳನ್ನು ನೋಡಬಹುದು.
ಮಿಥುನ: ಬಂಧುಗಳೊಂದಿಗೆ ವೈಮನಸ್ಸು ಉಂಟಾಗ ದಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕಟಕ: ದೂರ ಪ್ರಯಾಣ ಮಾಡುವಿರಿ. ಸಹೋದರರೊಂದಿಗೆ ವಾದ-ವಿವಾದಕ್ಕಿಳಿಯದಿರಿ.
ಸಿಂಹ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.
ಕನ್ಯಾ: ವೃತ್ತಿ ಜೀವನದಲ್ಲಿ ಏರುಪೇರು ಉಂಟಾಗಿ ಗೊಂದಲ ಮೂಡಬಹುದು.
ತುಲಾ: ಕಚೇರಿಯಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ.
ವೃಶ್ಚಿಕ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯಗಳಲ್ಲಿ ವಿಫಲವಾಗಲಿದೆ. ಪರರ ವಿಷಯದಲ್ಲಿ ಜಾಗ್ರತೆ ಇರಲಿ.
ಧನುಸ್ಸು: ಮುಖಭಂಗವಾಗುವಂಥ ಮಾತುಗಳ ಬಳಕೆ ಮಾಡದಿರುವುದು ಒಳಿತು. ಓದಿನಲ್ಲಿ ಏಕಾಗ್ರತೆ ವಹಿಸಿ.
ಮಕರ: ವಿನಾಕಾರಣ ಅಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.
ಕುಂಭ: ಕೃಷಿ ಚಟುವಟಿಕೆಗಳಲ್ಲಿ ಸಮಸ್ಯೆ ಎದುರಾಗಬಹುದು. ಕುಟುಂಬದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು.
ಮೀನ: ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
DailyHoroscope,#Hor oscope, #KannadaHoroscope, #TodayHoroscope, #ರಾಶಿಭವಿಷ್ಯ,