ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-01-2023)

Social Share

ನಿತ್ಯ ನೀತಿ: ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈನಲ್ಲಿ ಬರುತ್ತಾನೆ, ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು. ಆದರೆ ಮನುಷ್ಯ ಬರುವಾಗ ಭಾಗ್ಯದ ಜತೆ ಬರುತ್ತಾನೆ, ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.

ಪಂಚಾಂಗ ಬುಧವಾರ 25-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಪರಿಘ / ಕರಣ: ಭವ
ಸೂರ್ಯೋದಯ: ಬೆ.06.46
ಸೂರ್ಯಾಸ್ತ : 06.17
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಕೆಲಸದ ಒತ್ತಡ ಕಡಿಮೆಯಾಗುವುದರಲ್ಲದೆ ಸರಾಗವಾಗಿ ಮುಗಿಯಲಿದೆ.
ವೃಷಭ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಬೆಳ್ಳಿ ವ್ಯಾಪಾರಿಗಳಿಗೆ ಲಾಭ.
ಮಿಥುನ: ಲೇವಾದೇವಿ ವ್ಯವಹಾರ ನಡೆಸುವುದು ಸರಿ ಯಲ್ಲ. ಅನವಶ್ಯಕ ಗೊಂದಲ ಮೈಮೇಲೆ ಎಳೆದುಕೊಳ್ಳದಿರಿ.

ಕಟಕ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಸಿಂಹ: ಉದ್ಯೋಗದಲ್ಲಿರುವ ಒತ್ತಡ ನಿವಾರಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ.
ಕನ್ಯಾ: ಅಭಿವೃದ್ಧಿಗೆ ಪೂರಕ ವಾದ ಹೊಸ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮ ಮೇಲೆ ಹೊಂದಿದ್ದ ಅಪನಂಬಿಕೆಗಳು ದೂರಾಗಲಿವೆ.

ತುಲಾ: ಆಹಾರದಲ್ಲಾಗುವ ವ್ಯತ್ಯಾಸದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಲಿದೆ.
ವೃಶ್ಚಿಕ: ವೃತ್ತಿ ಮತ್ತು ಮುಂದಿನ ಬದುಕಿನ ಬಗ್ಗೆ ಗಂಬೀರವಾಗಿ ಚಿಂತಿಸುವ ಅಗತ್ಯವಿದೆ.
ಧನುಸ್ಸು: ನಿರಂತರ ಕೆಲಸ-ಕಾರ್ಯಗಳಿಂದ ಹೊರಬರಲು ಪ್ರಯತ್ನ ನಡೆಸುವಿರಿ.

ಮಕರ: ಅಕ್ಕಪಕ್ಕದವರೊಂದಿಗೆ ಸ್ನೇಹಯುತ ಜೀವನ ನಡೆಸುವಿರಿ. ಜೀವನ ಶೈಲಿ ಬದಲಾಗಲಿದೆ.
ಕುಂಭ: ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಬೆಳ್ಳಿ ವ್ಯಾಪಾರಿಗಳಿಗೆ ಲಾಭವಾಗಲಿದೆ.
ಮೀನ: ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಿ. ಹಿತಶತ್ರುಗಳ ಕಾಟ ತಪ್ಪಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article