ನಿತ್ಯ ನೀತಿ: ಯಾವಾಗಲೂ ಗುಣವಂತರ ಜತೆ ಗೆಳೆತನ ಬೆಳೆಸುವುದು ಶ್ರೇಯಸ್ಕರ. ಏಕೆಂದರೆ ಹಾಲಲ್ಲಿ ನೀರು ಹಾಲಾಗುವಂತೆ ನಾವು ಗುಣವಂತರ ಜತೆ ಸೇರಿ ಗುಣವಂತರಾಗುತ್ತೇವೆ.
ಸೋಮವಾರ ಪಂಚಾಂಗ 25-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ /ತಿಥಿ: ದ್ವಾದಶಿ / ನಕ್ಷತ್ರ: ಮೃಗಶಿರಾ /ಮಳೆ ನಕ್ಷತ್ರ: ಪುಷ್ಯ
*ಸೂರ್ಯೋದಯ: ಬೆ.06.04
*ಸೂರ್ಯಾಸ್ತ: 06.49
*ರಾಹುಕಾಲ: 7.30-9.00
*ಯಮಗಂಡ ಕಾಲ: 10.30-12.00
*ಗುಳಿಕ ಕಾಲ: 1.30-3.00
ರಾಶಿ ಭವಿಷ್ಯ
ಮೇಷ: ಸ್ತ್ರೀಯರಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದಿರಿ.
ವೃಷಭ: ಧರ್ಮ ಕಾರ್ಯ ಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
ಮಿಥುನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಕಟಕ: ಆದಾಯ ಹೆಚ್ಚಾದರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ.
ಸಿಂಹ: ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಕನ್ಯಾ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಉತ್ತಮ.
ತುಲಾ: ಸಂಗಾತಿಯೊಂದಿಗೆ ಚರ್ಚಿಸಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ.
ವೃಶ್ಚಿಕ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ಧನುಸ್ಸು: ಹೊಸ ಜನರನ್ನು ಭೇಟಿ ಮಾಡು ವುದರಿಂದ ಹೆಚ್ಚು ಪ್ರಯೋಜನವಾಗಲಿದೆ.
ಮಕರ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಕುಂಭ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಮೀನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.