ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-08-2022)

Social Share

ನಿತ್ಯ ನೀತಿ: ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಬಂದಂತೆ ಸ್ವೀಕರಿಸಿದರೆ ಎದುರಿಸುವ ಶಕ್ತಿ ತಂತಾನೇ ಬರುತ್ತದೆ.

ಪಂಚಾಂಗ ಗುರುವಾರ 25-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ /ವರ್ಷ ಋತು / ಶ್ರಾವಣ ಮಾಸ /ಕೃಷ್ಣ ಪಕ್ಷ / ತಿಥಿ: ತ್ರಯೋದಶಿ /ನಕ್ಷತ್ರ: ಪುಷ್ಯ /ಮಳೆ ನಕ್ಷತ್ರ: ಮಖಾ
ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.35
ರಾಹುಕಾಲ: 1.30-3.00
ಯಮಗಂಡ ಕಾಲ: 6.00-7.30
ಗುಳಿಕ ಕಾಲ: 9.00-10.30

ರಾಶಿ ಭವಿಷ್ಯ
ಮೇಷ
: ಹೊಸ ಉದ್ಯೋಗ ಸಿಗಲಿದೆ ಮತ್ತು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ವೃಷಭ: ತಾಳ್ಮೆಯಿಂದ ಕೆಲಸ-ಕಾರ್ಯಗಳನ್ನು ಮುಗಿಸುವಿರಿ. ವೃತ್ತಿಪರ ಜೀವನ ಅದ್ಭುತವಾಗಿರುತ್ತದೆ.
ಮಿಥುನ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆ ಕಡೆಯಿಂದ ಲಾಭವಾಗಲಿದೆ.

ಕಟಕ: ಉದ್ಯೋಗ ಬಯಸಲು ಪ್ರಯತ್ನಿಸುವವರಿಗೆ ಹೊಸ ಉದ್ಯೋಗ ಸಿಗಲಿದೆ.
ಸಿಂಹ: ಹಂತ ಹಂತವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
ಕನ್ಯಾ: ದೈಹಿಕ ಶ್ರಮ ಹೆಚ್ಚಾದರೂ ಆದಾಯ ದೊರೆಯಲಿದೆ.

ತುಲಾ: ಹಲವಾರು ವಿಚಾರಗಳಲ್ಲಿ ತೊಂದರೆ ಕಂಡು ಬಂದರೂ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ.
ವೃಶ್ಚಿಕ: ವಿದ್ಯಾರ್ಥಿಗಳು ತಮ್ಮ ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವರು.
ಧನುಸ್ಸು: ಇಂದಿನ ಪ್ರಯಾಣ ನೀವು ಅಂದುಕೊಂಡಂತೆ ಸುಗಮವಾಗಿರುವುದಿಲ್ಲ.

ಮಕರ: ಶೈಕ್ಷಣಿಕ ರಂಗದಲ್ಲಿನ ಚಟುವಟಿಕೆಗಳಿಂದ ಉತ್ತಮ ಹೆಸರು ಸಂಪಾದಿಸುವಿರಿ.
ಕುಂಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಲು ಬಹಳ ಪರಿಶ್ರಮ ಪಡಬೇಕಾದಿತು.
ಮೀನ: ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ. ವೈದ್ಯರಿಗೆ ಒಳ್ಳೆಯ ದಿನ.

Articles You Might Like

Share This Article