ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2022)

Social Share

ನಿತ್ಯ ನೀತಿ: ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ. ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಿ.

ಪಂಚಾಂಗ ಮಂಗಳವಾರ 25-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು /ಆಶ್ವಯುಜ ಮಾಸ / ಕೃಷ್ಣ ಪಕ್ಷ /ತಿಥಿ: ಅಮಾವಾಸ್ಯೆ /ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಸ್ವಾತಿ

ಸೂರ್ಯೋದಯ: ಬೆ.06.12
ಸೂರ್ಯಾಸ್ತ: 05.56
ರಾಹುಕಾಲ: 3.00-4.30
ಯಮಗಂಡ ಕಾಲ: 9.00-10.30
ಗುಳಿಕ ಕಾಲ: 12.00-1.30

ರಾಶಿ ಭವಿಷ್ಯ
ಮೇಷ
: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.
ವೃಷಭ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳು ಇತ್ಯರ್ಥವಾಗಲಿವೆ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸು ವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ಕಟಕ: ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಗಳ ಕಾಟ ಹೆಚ್ಚಾಗಲಿದೆ.
ಸಿಂಹ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಕನ್ಯಾ: ಹಣದ ಮೇಲಿನ ದುರಾಸೆಗಾಗಿ ಯಾವ ಕೆಟ್ಟ ಹಾದಿ ಹಿಡಿಯಬೇಡಿ.

ತುಲಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ ವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಸ್ನೇಹಿತರು, ಹಿತೈಷಿಗಳಿಂದ ಜೀವನ ನಡೆಸಲು ಬೇಕಾದ ಸಹಾಯ ಪಡೆಯುವಿರಿ.
ಧನುಸ್ಸು: ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೀತಿಪಾತ್ರರು ದೂರವಾಗುವರು.

ಮಕರ: ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.
ಕುಂಭ: ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನೂ ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕದಿರಿ.
ಮೀನ: ಸಹೋದರರಲ್ಲಿ ಉಂಟಾದ ಭಿನ್ನಾಭಿಪ್ರಾಯ ಸೇಡಿಗೆ ತಿರುಗುವ ಸಾಧ್ಯತೆಗಳಿವೆ.

Articles You Might Like

Share This Article