ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2022)

Social Share

ನಿತ್ಯ ನೀತಿ : ಜನರನ್ನು ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು. ಏಕೆಂದರೆ ಜನರು ಯಾವಾಗ ಬೇಕಾದರೂ ಬದಲಾಗುತ್ತಾರೆ. ಆದರೆ, ನೆನಪುಗಳು ಯಾವತ್ತಿಗೂ ಬದಲಾಗುವುದಿಲ್ಲ.

ಪಂಚಾಂಗ ಶುಕ್ರವಾರ 25-11-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಅನುರಾಧ

ಸೂರ್ಯೋದಯ: ಬೆ.06.23
ಸೂರ್ಯಾಸ್ತ: 05.50
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ: 7.30-9.00

ರಾಶಿ ಭವಿಷ್ಯ
ಮೇಷ
: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ.
ವೃಷಭ: ಆರೋಗ್ಯದಲ್ಲಿ ಏರುಪೇರಾಗಲಿದೆ. ವೈದ್ಯರ ಸಲಹೆ ಪಡೆಯುವುದು ಒಳಿತು.
ಮಿಥುನ: ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.

ಕಟಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.
ಸಿಂಹ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಕನ್ಯಾ: ಮಕ್ಕಳಿಂದ ಅನುಕೂಲವಾಗಲಿದೆ. ಗೌರವ-ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.

ತುಲಾ: ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ವೃಶ್ಚಿಕ: ಪ್ರಾಣಮಿತರರ ಸಹಕಾರದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆಯುವಿರಿ.
ಧನುಸ್ಸು: ಮಕ್ಕಳಿಂದ ನೋವುಂಟಾಗಬಹುದು. ಉದ್ಯೋಗ ದಲ್ಲಿ ಒತ್ತಡ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.

ಮಕರ: ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಬಹುದು. ಎಚ್ಚರಿಕೆಯಿಂದಿರಿ.
ಕುಂಭ: ಅನಾರೋಗ್ಯದಿಂದ ಬಳಲುತ್ತಿದ್ದ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಮೀನ: ಸರ್ಕಾರಿ ನೌಕರರಿಗೆ ಉತ್ತಮ ದಿನ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗೆ ಗಮನ ಹರಿಸಿ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article