ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-12-2022)

Social Share

ನಿತ್ಯ ನೀತಿ : ಆಲೋಚನೆಯು ಕೇವಲ ನೀವು ಹಿಂದೆ ಸಂಗ್ರಹಿಸಿದ ಮಾಹಿತಿಗಳ ಮರುಬಳಕೆಯಷ್ಟೆ.

ಪಂಚಾಂಗ ಭಾನುವಾರ 25-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ (ತೃತೀಯಾ) / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಮೂಲಾ

ಸೂರ್ಯೋದಯ : ಬೆ.06.39
ಸೂರ್ಯಾಸ್ತ : 06.01
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಲೇವಾದೇವಿ ವ್ಯವಹಾರ ನಡೆಸುವುದು ಸರಿಯಲ್ಲ. ಅನವಶ್ಯಕ ಗೊಂದಲಗಳನ್ನು ಮೈಮೇಲೆ ಎಳೆದುಕೊಳ್ಳದಿರಿ.
ವೃಷಭ: ಪೋಷಕರ ಸೇವೆಯನ್ನು ಆಸಕ್ತಿ ವಹಿಸಿ ಮಾಡುವುದರಿಂದ ತೊಂದರೆಗಳಿಂದ ಮುಕ್ತರಾಗುವಿರಿ.
ಮಿಥುನ: ಅನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಕಟಕ: ಭೂ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ನಿರೀಕ್ಷಿಸಿದಷ್ಟು ಲಭಿಸದಿದ್ದರೂ ಹಣಕ್ಕೆ ತೊಂದರೆಯಾಗದು.
ಸಿಂಹ: ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ನಿಮ್ಮ ನಡವಳಿಕೆ ತುಂಬಾ ಸೌಮ್ಯವಾಗಿರುತ್ತದೆ.
ಕನ್ಯಾ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.

ತುಲಾ: ಚುರುಕುತನದಿಂದ ಸಮಾಜದಲ್ಲಿ ಸ್ಥಾನಮಾನ ವೃದ್ಧಿಸಿ ಕೀರ್ತಿ ಪ್ರಾಪ್ತಿಯಾಗಲಿದೆ.
ವೃಶ್ಚಿಕ: ನೂತನ ಮಿತ್ರರ ಸಮಾಗಮವಾಗಲಿದೆ. ಧರ್ಮಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ ಸಿಗಲಿದೆ.
ಧನುಸ್ಸು: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.

ಮಕರ: ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಅನಗತ್ಯ ಮಾತುಗಳಿಗೆ ಕಿವಿಗೊಡದಿರಿ.
ಕುಂಭ: ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ನಿರೀಕ್ಷಿತ ಪ್ರಯಾಣದಿಂದ ಉತ್ತಮ ಧನಾರ್ಜನೆ.
ಮೀನ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶ . ಅವಿವಾಹಿತರಿಗೆ ವಿವಾಹ ಯೋಗ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article