ನಿತ್ಯ ನೀತಿ: ಅಡ್ಡದಾರಿ ಹಿಡಿದು ಗೆದ್ದು ಬೀಗುವುದಕ್ಕಿಂತ ಪ್ರಾಮಾಣಿಕವಾಗಿ ಸೋತು ತಲೆಬಾಗಿ ನಡೆಯುವುದೇ ಶ್ರೇಷ್ಠ.
ಪಂಚಾಂಗ ಶುಕ್ರವಾರ 26-08-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು /ವಣ ಮಾಸ /ಕೃಷ್ಣ ಪಕ್ಷ /ತಿಥಿ: ಚತುರ್ದಶಿ /ನಕ್ಷತ್ರ: ಆಶ್ಲೇಷಾ /ಮಳೆ ನಕ್ಷತ್ರ: ಮಖಾ
ಸೂರ್ಯೋದಯ:ಬೆ.06.08
ಸೂರ್ಯಾಸ್ತ: 06.35
ರಾಹುಕಾಲ: 10.30-12.00
ಯಮಗಂಡ ಕಾಲ: 3.00-4.30
ಗುಳಿಕ ಕಾಲ:7.30-9.00
ರಾಶಿ ಭವಿಷ್ಯ
ಮೇಷ: ನಿಮ್ಮ ಎಲ್ಲ ಹೊಸ ಯೋಜನೆಗಳನ್ನೂ ನಿಮ್ಮ ಸುತ್ತಮುತ್ತಲಿನವರು ಇಷ್ಟ ಪಡುವರು.
ವೃಷಭ: ಜ್ವರ ಅಥವಾ ಅಲರ್ಜಿಯಂತಹ ಸಮಸ್ಯೆ ಗಳು ಕಾಡಬಹುದು. ವೈದ್ಯರನ್ನು ಸಂಪರ್ಕಿಸಿ.
ಮಿಥುನ: ಅತಿಯಾಗಿ ಸಿಟ್ಟು ಮಾಡಿಕೊಳ್ಳುವುದ ರಿಂದ ಏಕಾಂಗಿಯಾಗಿ ಇರಬೇಕಾದ ಸಂದರ್ಭ ಬರಬಹುದು.
ಕಟಕ: ತಾಂತ್ರಿಕ ವರ್ಗದವ ರಿಗೆ ಮೇಲಕಾರಿಗಳಿಂದ ಒತ್ತಡಗಳು ಬರಲಿವೆ.
ಸಿಂಹ: ಸಹೋದ್ಯೋಗಿ ಗಳೊಂದಿಗಿನ ಬಾಂಧವ್ಯ ಮತ್ತಷ್ಟು ಉತ್ತಮಗೊಳ್ಳಲಿದೆ.
ಕನ್ಯಾ: ನಿಗದಿತ ಅವಯಲ್ಲಿ ಕೆಲಸ ಮುಗಿಸುವ ಪ್ರಯತ್ನದಲ್ಲಿ ಆತುರಾತುರವಾಗಿ ನಿರ್ಧಾರಗಳನ್ನು ಕೈಗೊಳ್ಳದಿರುವುದು ಒಳಿತು.
ತುಲಾ: ನಿಮ್ಮ ದಿನಚರಿ ಹಾಗೂ ನೀವು ಕೈಗೊಳ್ಳುವ ನಿರ್ಧಾರಗಳು ಮನೆಯವರಿಗೆ ತಿಳಿದಿರಲಿ.
ವೃಶ್ಚಿಕ: ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಧನುಸ್ಸು: ವೈಯಕ್ತಿಕ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೂರ ಪ್ರಯಾಣ ಬೇಡ.
ಮಕರ: ಉದ್ಯೋಗ ಸ್ಥಳದಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ.
ಕುಂಭ: ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಅಡ್ಡದಾರಿ ತುಳಿಯುವುದು ಬೇಡ.
ಮೀನ: ತಾಂತ್ರಿಕ ಕ್ಷೇತ್ರದವರಿಗೆ ಮೇಲಧಿಕಾರಿಗಳಿಂದ ಒತ್ತಡಗಳು ಬರಬಹುದು.