ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-11-2022)

Social Share

ನಿತ್ಯ ನೀತಿ: ಸರಳ ಜೀವನ ಸಂಯಮ ಕಲಿಸುತ್ತದೆ. ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ. ಸರಳ ನಡೆ-ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ.

ಪಂಚಾಂಗ ಶನಿವಾರ 26-11-2022
ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಮೂಲಾ /ಮಳೆ ನಕ್ಷತ್ರ: ಅನುರಾಧ
ಸೂರ್ಯೋದಯ: ಬೆ.06.23
ಸೂರ್ಯಾಸ್ತ: 05.50
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ: 6.00-7.30

ರಾಶಿ ಭವಿಷ್ಯ
ಮೇಷ
: ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ. ತಂದೆ ಮಾತಿನಂತೆ ನಡೆಯುವುದು ಶ್ರೇಯಸ್ಕರ.
ವೃಷಭ: ಉದ್ಯೋಗದ ಅನಿವಾರ್ಯತೆ ಬಿಟ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮಿಥುನ: ಜನರನ್ನು ಆಕರ್ಷಿಸುವ ಕಲೆ ಜತೆಗೆ ತಂತ್ರಗಾರಿಕೆ ಬಳಸಿ ಕೊಳ್ಳುವುದರಿಂದ ಲಾಭ ಗಳಿಸುವಿರಿ.

ಕಟಕ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.
ಸಿಂಹ: ಲೇವಾದೇವಿ ವ್ಯವಹಾರವನ್ನು ಆಲೋಚನೆ ಮಾಡಿ ಮುಂದುವರೆಸಿ.
ಕನ್ಯಾ: ವ್ಯಾಪಾರ-ವ್ಯವಹಾರ ದಲ್ಲಿ ಚೇತರಿಕೆ ಇದ್ದರೂ ಶತ್ರುಗಳ ಸ್ಪರ್ಧಾತ್ಮಕ ಗುಣದಿಂದ ಆತಂಕಕ್ಕೆ ಒಳಗಾಗುವಿರಿ.

ತುಲಾ: ಎಷ್ಟೇ ಚಾಣಾಕ್ಷತನ ತೋರಿದರೂ ಮಾತು ಗಾರಿಕೆಯಲ್ಲಿ ಸೋಲು ಒಪ್ಪಿಕೊಳ್ಳಬೇಕಾಗುತ್ತದೆ.
ವೃಶ್ಚಿಕ: ಆದರ್ಶ ಹಾಗೂ ತತ್ವಗಳ ಜತೆಗೆ ಹಿರಿಯರ ಉತ್ತಮ ಅನುಭವ ಹಾಗೂ ಸಲಹೆ ಅಳವಡಿಸಿಕೊಳ್ಳಿ.
ಧನುಸ್ಸು: ಮಸಾಲೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರವಿರುವುದು ಒಳಿತು.

ಮಕರ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಕುಂಭ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಮೀನ: ಅಧಿಕಾರಿಗಳ ಕೈಗೊಂಬೆಯಾಗಿರುವ ನಿಮಗೆ ಜವಾಬ್ದಾರಿಗಳು ಹೆಚ್ಚಾಗಲಿವೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article