ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(26-12-2022)

Social Share

ನಿತ್ಯ ನೀತಿ : ಖುಷಿಯಾಗಿರಲು ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ. ಏಕೆಂದರೆ ಸಂತೋಷ ಉಚಿತವಾಗಿ ಸಿಗುತ್ತದೆ.

ಪಂಚಾಂಗ ಸೋಮವಾರ 26-12-2022
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.39
ಸೂರ್ಯಾಸ್ತ : 06.01
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಆದಾಯ ಮತ್ತು ಖರ್ಚುಗಳಲ್ಲಿ ಸಮತೋಲನ ಸಾಧಿಸುವುದು ಒಳ್ಳೆಯದು.
ವೃಷಭ: ಅವಿವಾಹಿತರಿಗೆ ಬಾಳ ಸಂಗಾತಿ ಸಿಗುವ ಸಾಧ್ಯತೆ ಗಳಿವೆ. ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಬಯಸುವಿರಿ.
ಮಿಥುನ: ಕಠಿಣ ನಿರ್ಧಾರ ಕೈಗೊಳ್ಳುವ ಪ್ರಸಂಗ ಬರಬಹುದು. ಇದಕ್ಕಾಗಿ ವಿಚಲಿತರಾಗಬೇಕಿಲ್ಲ.

ಕಟಕ: ನೀವು ನೀಡುವ ಸಲಹೆ-ಸೂಚನೆಗಳನ್ನು ಮೇಲಧಿಕಾರಿಗಳು ಮಾನ್ಯ ಮಾಡುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ.
ಸಿಂಹ: ಹಣಕಾಸಿನ ವಿಚಾರ ದಲ್ಲಿ ವ್ಯತ್ಯಾಸಗಳಾಗಿ ಉದ್ಯೋಗ ಸ್ಥಳದಲ್ಲಿ ತಲೆತಗ್ಗಿಸುವ ಪರಿಸ್ಥಿತಿ ಎದುರಾಗಬಹುದು.
ಕನ್ಯಾ: ಹೊಸ ಕಾರ್ಯದಲ್ಲಿ ಹೆಜ್ಜೆಹೆಜ್ಜೆಗೂ ಸಮಸ್ಯೆಗಳು ಎದುರಾಗಬಹುದು.

ತುಲಾ: ಅಧಿಕ ಆತ್ಮವಿಶ್ವಾಸ ದಿಂದ ಸಾಮಥ್ರ್ಯಕ್ಕೂ ಮೀರಿ ಹೆಚ್ಚಿನ ಕೆಲಸ ಮಾಡಲು ಹೋಗುವುದು ಸರಿಯಲ್ಲ.
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚಿನ ತಯಾರಿ ನಡೆಸಬೇಕಾಗುತ್ತದೆ.
ಧನುಸ್ಸು: ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದುಕೊಳ್ಳಬಹುದು.

ಮಕರ: ಇತರರ ಮಾತಿಗೆ ಕಿವಿಗೊಡದೆ ನಿಮ್ಮಂತೆ ನೀವಿರುವುದು ಕಷ್ಟವೆಂದರೂ ಅದೇ ಒಳ್ಳೆಯದು.
ಕುಂಭ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ಮೀನ: ನಿಮ್ಮ ಅಭಿರುಚಿಗೆ ಹೊಂದುವಂತಹ ಜನರ ಪರಿಚಯವಾಗಿ ಮನಸ್ಸಿಗೆ ಸಂತಸವಾಗಲಿದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article