ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2022)

Social Share

ನಿತ್ಯ ನೀತಿ: ಅನುಮಾನ ತಪ್ಪಾಗಬಹುದು. ಅನುಭವ ಎಂದಿಗೂ ತಪ್ಪಾಗಲ್ಲ. ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ, ಅನುಭವ ಜೀವನದಲ್ಲಿ ನಾವು ಕಲಿತ ಪಾಠ.

ಬುಧವಾರ ಪಂಚಾಂಗ 27-07-2022
ಶುಭಕೃತ್ ನಾಮ ಸಂವತ್ಸರ
ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು /ಮಳೆ ನಕ್ಷತ್ರ: ಪುಷ್ಯ
*ಸೂರ್ಯೋದಯ: ಬೆ.06.04
*ಸೂರ್ಯಾಸ್ತ : 06.48
*ರಾಹುಕಾಲ: 12.00-1.30
*ಯಮಗಂಡ ಕಾಲ: 7.30-9.00
*ಗುಳಿಕ ಕಾಲ ; 10.30-12.00

ರಾಶಿ ಭವಿಷ್ಯ
ಮೇಷ: ವಧು ಅಥವಾ ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯುವುದು ಕಷ್ಟ.
ವೃಷಭ: ಮಕ್ಕಳ ಪ್ರಗತಿಯಲ್ಲಿ ಮಿಶ್ರ ಪ್ರತಿಫಲ ಕಾಣ ಬೇಕಾಗುತ್ತದೆ. ಶ್ರಮ ವಹಿಸಿ ಕೆಲಸ ಮಾಡಿ.
ಮಿಥುನ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವಿರಿ.

ಕಟಕ: ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆಯಾಗಬಹುದು.
ಸಿಂಹ: ಕೆಟ್ಟ ಆಲೋಚನೆ ಮಾಡುವುದನ್ನು ತಪ್ಪಿಸುವುದು ಒಳಿತು.
ಕನ್ಯಾ: ನೆರೆಹೊರೆಯವರು ನಿಮ್ಮನ್ನು ಸಾಲ ಕೇಳಲು ಬರಬಹುದು.

ತುಲಾ: ಆರೋಗ್ಯ ಕಾಪಾಡಿ ಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು.
ವೃಶ್ಚಿಕ: ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡು ವುದದರಿಂದ ಅದರ ಪೂರ್ಣ ಲಾಭ ಸಿಗಲಿದೆ.
ಧನುಸ್ಸು: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ಮಕರ: ವ್ಯವಹಾರಗಳ ಮೂಲಕ ಹಣ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗಿದೆ.
ಕುಂಭ: ಜಾಗರೂಕತೆಯಿಂದ ಹಣ ಖರ್ಚು ಮಾಡಿ.
ಮೀನ: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.

Articles You Might Like

Share This Article