ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-08-2022)

Social Share

ನಿತ್ಯ ನೀತಿ: ಹಣ ನೋಡಿ ಕೊಡುವ ಬೆಲೆ, ಅಂದ ನೋಡಿ ಹುಟ್ಟೋ ಪ್ರೀತಿ, ಆಸ್ತಿ ನೋಡಿ ಒಂದಾಗೋ ಬಂಧುಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ.

ಪಂಚಾಂಗ ಶನಿವಾರ 27-08-2022
ಶುಭಕೃತ್ ನಾಮ ಸಂವತ್ಸರ /ದಕ್ಷಿಣಾಯನ /ವರ್ಷ ಋತು /ಶ್ರಾವಣ ಮಾಸ /ಕೃಷ್ಣ ಪಕ್ಷ /ತಿಥಿ: ಅಮಾವಾಸ್ಯೆ /ನಕ್ಷತ್ರ: ಮಘಾ /ಮಳೆ ನಕ್ಷತ್ರ: ಮಖಾ

ಸೂರ್ಯೋದಯ: ಬೆ.06.08
ಸೂರ್ಯಾಸ್ತ: 06.34
ರಾಹುಕಾಲ: 9.00-10.30
ಯಮಗಂಡ ಕಾಲ: 1.30-3.00
ಗುಳಿಕ ಕಾಲ : 6.00-7.30

ರಾಶಿ ಭವಿಷ್ಯ
ಮೇಷ
: ಸಂಬಂಧಿಕರ ವಲಯದಲ್ಲಿ ನಿಮ್ಮ ಮೇಲಿದ್ದ ತಪ್ಪು ಅಭಿಪ್ರಾಯಗಳು ದೂರವಾಗುವುವು.
ವೃಷಭ: ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ರೀತಿ ತಿಳಿದುಕೊಳ್ಳಿ.
ಮಿಥುನ: ಎಂಥ ಪರಿಸ್ಥಿತಿ ಎದುರಾದರೂ ಆತ್ಮ ವಿಶ್ವಾಸದಿಂದ ಜೀವನ ನಡೆಸಿ.

ಕಟಕ: ಕುಟುಂಬ ಸದಸ್ಯರು, ಸಂಬಂಧಿಕರೊಂದಿಗೆ ಅvಕ ಸಮಯ ಕಳೆಯುವಿರಿ.
ಸಿಂಹ: ನ್ಯಾಯಾಂಗ ಇಲಾಖೆಯಲ್ಲಿರುವವರಿಗೆ ಬಡ್ತಿ ಅಥವಾ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ: ಲೇವಾದೇವಿ ವ್ಯವಹಾರಗಳಿಂದ ಗಳಿಸಿದ ಹಣ ಒಳ್ಳೆಯ ಕಾರ್ಯಗಳಿಗೆ ಬಳಕೆಯಾಗಲಿದೆ.
ವೃಶ್ಚಿಕ: ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಆಗಮನ ವಾಗಲಿದೆ. ಭೂ ವ್ಯವಹಾರದಲ್ಲಿ ಲಾಭ ಗಳಿಸುವಿರಿ.
ಧನುಸ್ಸು: ಮೇಲಧಿಕಾರಿಗಳಿಗೆ ಸಹೋದ್ಯೋಗಿ ಗಳಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯಲಿದೆ.

ಮಕರ: ಆಪ್ತರರೊಬ್ಬರ ನೆರವು ಮಗನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.
ಕುಂಭ: ಹಣದ ಮೇಲಿನ ದುರಾಸೆಗಾಗಿ ಯಾವ ಕೆಟ್ಟ ಹಾದಿಯನ್ನೂ ಹಿಡಿಯಬೇಡಿ.
ಮೀನ: ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

Articles You Might Like

Share This Article